ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾರಾಷ್ಟ್ರ ಕರಾಟೆ Karate ಸಂಸ್ಥೆ ಆಯೋಜಿಸಿದ ಆಲ್ ಇಂಡಿಯಾ ಓಪನ್ ಕರಾಟೆ ಪಂದ್ಯಾವಳಿಯಲ್ಲಿ ಲೇಖನ ಹಾಗೂ ಅರ್ಹಾನ್ ಬಹುಮಾನ ಗಳಿಸಿದ್ದಾರೆ.
ಫೆಬ್ರವರಿ 11ರಂದು ಮುಂಬೈನ ಮಿರ ರಸ್ತೆಯ ಸಾಮ್ರಾಟ್ ಅಶೋಕ್ ಬುದ್ಧ ವಿಹಾರ ಪಾರ್ಕ್ ನಲ್ಲಿ ಮಹಾರಾಷ್ಟ್ರ ಕರಾಟೆ ಸಂಸ್ಥೆ ಆಯೋಜಿಸಿದ ಆಲ್ ಇಂಡಿಯಾ ಓಪನ್ ಕರಾಟೆ ಪಂದ್ಯಾವಳಿಯಲ್ಲಿ ಶಿವಮೊಗ್ಗ ಗ್ರಾಮಾಂತರದ ಕರಾಟೆ ತರಬೇತಿದಾರ ರಮೇಶ್ ಅವರ ವಿದ್ಯಾರ್ಥಿಗಳಾದ ಕಲ್ಲು ಗಂಗೂರು ಸರ್ಕಾರಿ ಶಾಲೆಯ ಲೇಖನ ಹಾಗೂ ಬಸವ ಗಂಗೂರು ಸರ್ಕಾರಿ ಶಾಲೆಯ ಅರ್ಹಾನ್ ಭಾಗವಹಿಸಿ ಕಟಾ ಮತ್ತು ಕುಮತಿ ವಿಭಾಗದಲ್ಲಿ ಕ್ರಮವಾಗಿ ಪ್ರಥಮ ಹಾಗೂ ಪ್ರಥಮ, ಮತ್ತು ಪ್ರಥಮ – ದ್ವಿತೀಯ ಬಹುಮಾನವನ್ನು ಪಡೆದಿದ್ದಾರೆ.
Also read: ವಿಶ್ವಾಸಮತ ಪರೀಕ್ಷೆ | ನಿತೀಶ್ ಕುಮಾರ್ ಯಶಸ್ವಿ ಬಹುಮತ ಸಾಬೀತು
ಈ ಸಂದರ್ಭದಲ್ಲಿ ಪೋಷಕರಾದ ಭೀಮಪ್ಪ ಸೇರಿದಂತೆ ಆಯೋಜಕರಾದ ವಿಜಯ್ ಉಪಸ್ಥಿತರಿದ್ದು, ವಿಜೇತ ಕ್ರೀಡಾಪಟುಗಳಿಗೆ ಕಲ್ಲು ಗಂಗೂರು ಮಾರುತಿ ಕರಾಟೆ ಹಾಗೂ ಕ್ರೀಡಾ ತರಬೇತಿ ಕೇಂದ್ರ ಮತ್ತು ಬಸವಗಂಗೂರು ಭಜರಂಗಿ ಕರಾಟೆ ಮತ್ತು ಕ್ರೀಡಾ ತರಬೇತಿ ಕೇಂದ್ರ ಪದಾಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಶುಭ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post