ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ | .
ಮರಳು ಮಾಫೀಯಾ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾದವರು ಹಿಂದುತ್ವವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಸಚಿವ ಗುಂಡೂರಾವ್ #Minister Dinesh Gundurao ಕಳವಳ ವ್ಯಕ್ತಪಡಿಸಿದರು.
ಶಿವಮೊಗ್ಗದ ಐಬಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆಯುತ್ತಿರುವ ಕೋಮು ಸಂಘರ್ಷ ನಡೆಯುತ್ತಿದ್ದು ಅದಕ್ಕೆ ಪ್ರತಿಕ್ರಿಯಿಸಿದ ಅವರು ಹಿಂದುತ್ವದ ಹೆಸರಿನಲ್ಲಿ ಎಲ್ಲಾ ಕೊಲೆ ಸುಲಿಗೆಗಳು ನಡೆಯುತ್ತಿದೆ. ನಿನ್ನೆ ನಡೆದ ಕೊಲೆಯ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರತೀಕಾರದ ಕೊಲೆ ನಡದರೆ ಜನ ಭೀತಿಗೊಳಗಾಗುತ್ತಾರೆ ಎಂದರು.

ಎಂಎಲ್‍ಸಿ ರವಿಕುಮಾರ್ ತಪ್ಪಾಗಿ ಹೇಳಿಕೆ ನೀಡಿ, ನಂತರ ಕ್ಷಮೆ ಕೇಳಿದ್ದಾರೆ. ಅದು ಸಹ ಅವರ ಮನಸ್ಸಿನ ಮಾತುಗಳು ಎಂದ ಅವರು ಸುಹಾಸ್ ಶೆಟ್ಟಿ ಒಬ್ಬ ರೌಡಿ ಶೀಟರ್ ಆಗಿದ್ದ ಎರಡು ಕೊಲೆ ಆರೋಪದಲ್ಲಿ ಭಾಗಿಯಾಗಿದ್ದ. ಅಂತಹವನ ಕೊಲೆಯಾಗಿದೆ. ಇದಕ್ಕೆ ಪ್ರತೀಕಾರ ಎಂಬಂತೆ ಬಂಟ್ವಾಳದಲ್ಲಿ ಅಬ್ದುಲ್ ರೆಹಮಾನ್ ಕೊಲೆಯಾಗಿದೆ ಮತ್ತೋರ್ವನಿಗೆ ಗಾಯಗಳಾಗಿವೆ. ಇಂತಹ ಪ್ರತೀಕಾರ ನಡೆದರೆ ಜನ ಬದುಕುವುದುವಹೇಗೆ ಎಂದರು.

ಮಂಗಳೂರಿನಲ್ಲಿ ಇಂತಹ ಪ್ರತೀಕಾರದ ಹತ್ಯೆ ಮುಂದು ವರೆದರೆ ಯಾರು ಬಂದು ಬಂಡವಾಳ ಹಾಕುತ್ತಾರೆ ಎಂದು ಪ್ರಶ್ನಿಸಿದ ಅವರು. ಹಿಂದುತ್ವದ ಹೆಸರಿನಲ್ಲಿ ಎಲ್ಲವೂ ನಡೆಯುತ್ತದೆ. ಧರ್ಮದ ಬೆಂಬಲವಿದೆ ಎಂಬ ಕಾರಣಕ್ಕೆ ಎಲ್ಲವೂ ನಡೆದರೆ ಹೇಗೆ ? ಮಂಗಳೂರಿನಲ್ಲಿ ಹತ್ಯೆಯಾದವನು ಕಾಂಗ್ರೆಸ್ ಕಾರ್ಯಕರ್ತನಾಗಿದ್ದು. ಇದಕ್ಕೆ ಮತ್ತೊಂದು ಹತ್ಯೆ ನಡೆಯಬೇಕಿದೆ ಎಂಬ ಆಡಿಯೋ ಹೊರಬೀಳುತ್ತಿರುವುದಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಆಡಿಯೋ ಬಗ್ಗೆ ನನಗೆ ಗೊತ್ತಿಲ್ಲ ಎಂದು ನುಣಚಿಕೊಂಡರು.

ಕೋವಿಡ್ ಈಗ ಕಾಣಿಸಿಕೊಂಡ ವೈರಾಣುವಿನಿಂದ ತೀವ್ರತರನಾದ ಸಾವು ನೋವುಗಳಾಗುವುದಿಲ್ಲ. ಈ ರೂಪಾಂತರಿ ತಳಿ ಪರಿಣಾಮ ಬೀರುವುದಿಲ್ಲ. ವಯಸ್ಸಾದವರು, ಮಕ್ಕಳು ಮತ್ತು ಗರ್ಭಿಣಿಯರು ಮಾಸ್ಕ್ ಧರಿಸಲು ಹೇಳಿದ್ದೇವೆ. ಕೋವಿಡ್ ಕಾಣಿಸಿಕೊಂಡರೆ ಪರೀಕ್ಷೆ ನಡೆಸಬೇಕು. ಮಕ್ಕಳಿಗೆ ಜ್ವರ ನೆಗಡಿ ಕೆಮ್ಮಿದ್ದರೆ ಶಾಲೆಗೆ ಕಳುಹಿಸಬೇಡಿ ಎಂದಿರುವುದಾಗಿ ತಿಳಿಸಿದರು
ಕರ್ನಾಟಕ ಎರಡು ಚಾಮರಾಜ ನಗರ ಎರಡು ಕಡೆ 14 ಕಡೆ ಮೆಡಿಕಲ್ ಆಸ್ಪತ್ರೆಯಿದೆ. ಅಲ್ಲಿ ನಮ್ಮ ಜಿಲ್ಲಾ ಆಸ್ಪತ್ರೆ ಆರಂಭಿಸುವ ಚಿಂತನೆ ನಡೆದಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ 3.5 ಲಕ್ಷ ರೂ. ಮೆಡಿಸಿನ್ ದೊರೆತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ವೈದ್ಯಕೀಯ ಶಿಕ್ಷಣ ಸಚಿವರಿಗೆ ಈ ಪ್ರಶ್ನೆ ಕೇಳುವಂತೆ ಕೋರಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಸಿನ್ ಸಿಗುವಂತೆ ನಾವು ಮಾಡುತ್ತೇವೆ. ಮೆಡಿಕಲ್ ಕಾಲೇಜಿನಲ್ಲಿ ಕೀಮೋ ತೆರಪಿ ಆರಂಭಿಸುವುದಾಗಿ ಸಿಎಂ ಹೇಳಿದ್ದಾರೆ. ಜನೌಷಧಿ ಕೇಂದ್ರ 1400 ಕೇಂದ್ರವಿದೆ ಇದರಲ್ಲಿ 180 ಕೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿದೆ. ನಮ್ಮಲ್ಲಿ ಮೆಡಿಸಿನ್ ಉಚಿತವಾಗಿ ಸಿಗಲಿದ್ದು ಅದನ್ನು ಹಣಕ್ಕೆ ಖರೀದಿಸದಂತೆ ಜನೌಷಧವನ್ನು ತೆರವುಗೊಳಿಸಲಾಗುತ್ತಿದೆ. ನಮ್ಮಲ್ಲಿ ಮೆಡಿಸಿನ್ ಕೊಡುತ್ತೇವೆ. ಎಸೆನ್ಸಿಯಲ್ ಮೆಡಿಸಿನ್ ರಿಕ್ವೈಡ್ ಮೆಡಿಸಿನ್ ಕೊಡುತ್ತೇವೆ. ಔಷಧಿ ಬೇಕಾದರೆ ಸಾರ್ವಜನಿಕರು ಹೊರಗಡೆಯಿಂದ ಖರೀದಿಸಬಹುದು. ನಮ್ಮ ಆಧ್ಯತೆ ಉಚಿತವಾಗಿ ನಡೆಯಬೇಕು ಎಂಬುದು ಅಷ್ಟೆ. ಮೆಡಿಸಿನ್ ಆಸ್ಪತ್ರೆಯಲ್ಲಿ ಸಿಗುವಂತೆ ನಾವು ಮಾಡುತ್ತೇವೆ ಎಂದು ಸಚಿವರು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post