ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಹಾಗೂ ಶಾಲೆಗಳ ಕೊಠಡಿಗಳಿಗೆ ಸಚಿವ ಈಶ್ವರಪ್ಪ ಭೂಮಿ ಪೂಜೆ ನೆರವೇರಿಸಿ, ಸುಮಾರು 10 ಕೋಟಿ 30 ಲಕ್ಷ ವೆಚ್ಚದ ಎರಡು ಕಾಮಗಾರಿಗಳಿಗೆ ಚಾಲನೆ ನೀಡಿದರು.
ಪಿಡಬ್ಲುಡಿ ವತಿಯಿಂದ 9 ಕೋಟಿ ರೂ. ವೆಚ್ಚದಲ್ಲಿ ಹಾಗೂ ನೀರಾವರಿ ಇಲಾಖೆಯಿಂದ ರೇಣುಕಾಂಬ ಬಡಾವಣೆ, ಬಸವೇಶ್ವರ ನಗರ , ಮಿಳಗಟ್ಟ, ಶುಭಮಂಗಳದ ವಿನೋಬ ನಗರ, ಅಶ್ವಥ್ ನಗರ, ಸೇರಿದಂತೆ 11 ಕಡೆ ಬಾಕ್ಸ್ ಚರಂಡಿ, ರಸ್ತೆ ಕಾಮಗಾರಿಗಳಿಗೆ ಹಾಗೂ ಸೈನ್ಸ್ ಫೀಲ್ಡ್, ಮೈನ್ ಮಿಡ್ಲಿ ಸ್ಕೂಲ್ ನಲ್ಲಿ ತಲಾ ಮೂರು ಕೊಠಡಿಗಳ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಇದರ ಜೊತೆಗೆ ಇಂದು ಹರಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಮಾತನಾಡಿ ಕೋವಿಡ್ ನಿಂದ ಶಾಲೆಗಳು ನಿಂತಿದ್ದವು ಈಗ ಶಾಲೆ ಪುನರಾರಂಭಗೊಂಡಿದೆ ಪ್ರತಿಯೊಬ್ಬರೂ ಶಾಲೆಗೆ ಬರಬೇಕೆಂದು ಕೋರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post