ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ MLA DSArun ಅವರು ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು.
ವಿನಾಯಕ ನಗರದ ರೋಟರಿ ಬ್ಲಡ್ ಬ್ಯಾಂಕ್’ನಲ್ಲಿ ಸ್ನೇಹಿತರೊಂದಿಗೆ ತಮ್ಮ 40ನೆಯ ಜನ್ಮದಿನವನ್ನು ಅರುಣ್ ಅವರು ಆಚರಿಸಿಕೊಂಡರು.
ಆನಂತರ ನಡೆದ ಕಾರ್ಯಕ್ರಮದಲ್ಲಿ ಬಟ್ಟೆ ಹೊಲಿಯುವ ಯಂತ್ರವನ್ನು ಸಾಂಕೇತಿಕವಾಗಿ ವಿತರಣೆ ಮಾಡಿದರು.
Also read: 3 ವರ್ಷಗಳಲ್ಲಿ 3000 ಕರ್ನಾಟಕ ಪಬ್ಲಿಕ್ ಸ್ಕೂಲ್’ಗಳ ಸ್ಥಾಪನೆ: ಸಚಿವ ಮಧು ಬಂಗಾರಪ್ಪ
ಟೆಕ್ನೋರಿಂಗ್ಸ್’ನ ಭೂಪಾಳಂ ಶಶಿಧರ್, ಭಜರಂಗದಳ ರಾಜೇಶ್ ಗೌಡ, ಅಶ್ವತ್ಥ್ ನಾರಾಯಣ, ಮುರುಳಿ, ಅಮರ್, ದೀಪಕ್, ಸುರೇಶ್ ಬಾಬು, ಮೋಹನ್, ಮಧುಸೂಧನ್, ದೇವರಾಜ್, ಹರ್ಷ ಪಟೇಲ್, ನಾಗರಾಜ್ ನಾಡಿಗ್ ಸುರೇಶ್ ಹಾಗೂ ಡಿ.ಎಸ್. ಅರುಣ್ ಅಭಿಮಾನಿಗಳ ಬಳಗದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post