ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶರಾವತಿ Sharavathi ಸಂತ್ರಸ್ಥರ ಮತ್ತು ವಿಐಎಸ್’ಎಲ್ ಕಾರ್ಖಾನೆ #VISL ಕಾರ್ಮಿಕರ ಸಮಸ್ಯೆಯನ್ನು ನಾನು ಖಂಡಿತ ಬಗೆಹರಿಸುತ್ತೇನೆ ಈಗಾಗಲೇ ಈ ಬಗ್ಗೆ ಪ್ರಯತ್ನದ ಹಾದಿ ಮುಂದುವರೆದಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ #B Y Raghavendra ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶರಾವತಿ ಸಂತ್ರಸ್ಥರ ಮತ್ತು ವಿಐಎಸ್’ಎಲ್ ಕಾರ್ಖಾನೆ ಸಮಸ್ಯೆ ಬಿಜೆಪಿ ಸರ್ಕಾರದ್ದಲ್ಲ. 1980ರವರೆಗು ಮತ್ತು ಅದಾದ ನಂತರವು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇತ್ತು. ನಾಡಿನ ಬೆಳಕಿಗಾಗಿ ಭೂಮಿ ಕಳೆದುಕೊಂಡ ಮುಳುಗಡೆ ಸಂತ್ರಸ್ಥರ ಸಮಸ್ಯೆಯನ್ನು ಆಗಿನ ಕಾಂಗ್ರೆಸ್ ಸರ್ಕಾರ ಏಕೆ ಬಗೆಹರಿಸಲಿಲ್ಲ. ಈಗ ನಮ್ಮ ಕಡೆ ಬೆರಳು ತೋರಿಸುತ್ತಿದ್ದಾರೆ ಎಂದರು.

ಇದು ಕಾಂಗ್ರೆಸ್ಸಿನ ಸರ್ಕಾರದ ತಪ್ಪಾಗಿದೆ. ಈ ತಪ್ಪನ್ನು ನಾವು ಸರಿಮಾಡಲು ಸತತ ಹೋರಾಟ ಮಾಡುತ್ತಿದ್ದೇವೆ. ಸಂಸತ್‍ನಲ್ಲಿ ಮಾತನಾಡಿಲ್ಲ ಎಂದು ಕಾಂಗ್ರೆಸ್ಸಿಗರು ಹೇಳುತ್ತಾರೆ. ಆದರೆ ನಾನು ಮಾತನಾಡಿರುವುದನ್ನು ರಾಜ್ಯದ ಎಲ್ಲಾ ಪತ್ರಿಕೆಗಳು ವರದಿ ಮಾಡಿದೆ ಎಂದು ಪತ್ರಿಕಾ ವರದಿಯನ್ನು ತೋರಿಸಿದರು.

Also read: BREAKING | ಚುನಾವಣೆ ಹೊತ್ತಲ್ಲಿ ಸಿಎಂ, ಡಿಸಿಎಂಗೆ ಸಮನ್ಸ್ ಜಾರಿ | ಕಾರಣವೇನು? ಏನು ಪ್ರಕರಣ?
ಹಾಗೆಯೇ ವಿ.ಐ.ಎಸ್.ಎಲ್. ಕಾರ್ಖಾನೆ ಸಂಕಷ್ಟದಲ್ಲಿದ್ದಾಗ ರಾಜ್ಯ ಸರ್ಕಾರ ಅದನ್ನು ಕೇಂದ್ರಕ್ಕೆ ವಹಿಸಿಕೊಟ್ಟಿತ್ತು. ಒಂದು ಪಕ್ಷ ವಿ.ಐ.ಎಸ್.ಎಲ್. ಕಾರ್ಖಾನೆ ನಷ್ಟ ಹೊಂದಿದರೆ ಅದನ್ನು ಮತ್ತೆ ರಾಜ್ಯ ಸರ್ಕಾರಕ್ಕೆ ವಾಪಾಸ್ಸು ಕೊಡಬೇಕು ಎಂಬ ನಿಯಮವನ್ನು ಅಂದಿನ ರಾಜ್ಯ ಸರ್ಕಾರ ಮಾಡಲಿಲ್ಲ. ಇದು ಕೂಡ ಕಾಂಗ್ರೆಸ್ ಸರ್ಕಾರದ ತಪ್ಪು, ಆದರೆ ನಾನು ಸಂಸದನಾದ ಮೇಲೆ ವಿ.ಐ.ಎಸ್.ಎಲ್. ಕಾರ್ಖಾನೆಗೆ ಬೀಗ ಹಾಕಲು ಬಿಟ್ಟಿಲ್ಲ. ಹಾಗೆಯೇ ಎಂಪಿಎಂ ಕಾರ್ಖಾನೆಯ ಪುನಶ್ಚೇತನಕ್ಕೂ ನಾನು ಪ್ರಯತ್ನಿಸುತ್ತಿದ್ದೇನೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post