ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಒಂದು ತಿಂಗಳಿನಲ್ಲಿ ದೆಹಲಿ ವಿಮಾನಯಾನ ಸಚಿವಾಲಯದಿಂದ ‘ ಮಲ್ಟಿ ಡಿಸಿಪ್ಲಿನರಿ ತಂಡವು’ ಶಿವಮೊಗ್ಗದ ಸೊಗನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಕೊನೆಯ ಹಂತದ ವೀಕ್ಷಣೆಗೆ ಆಗಮಿಸುತ್ತಿದ್ದು, ಅದರ ಪೂರ್ವಭಾವಿಯಾಗಿ ಸಂಸದ ಬಿ. ವೈ ರಾಘವೇಂದ್ರ MP Raghavendra ಅವರು ಇಂದು ದೆಹಲಿ ವಿಮಾನಯಾನ ಸಚಿವಾಲಯ ಹೆಚ್ಚುವರಿ ಕಾರ್ಯದರ್ಶಿ ಉಷಾ ಪದಿ ಅವರೊಂದಿಗೆ ವಿಮಾನ ನಿಲ್ದಾಣದ ಕಾಮಗಾರಿ ವೀಕ್ಷಿಸಿ, ವಿವಿಧ ಏರ್ ಲೈನ್ ಸಂಸ್ಥೆಗಳೊಂದಿಗೆ ವರ್ಚವಲ್ ಸಭೆಯಲ್ಲಿ ಅಧಿಕಾರಿಕಾರಿಗಳೊಂದಿಗೆ ಭಾಗವಹಿಸಿದರು.
ಈ ಸಂದರ್ಭದಲ್ಲಿ ಐಎಸ್, ಎಸಿಎಸ್, ಐಡಿಡಿ ಅಧಿಕಾರಿಯಾದ ಗೌರವ್ ಗುಪ್ತ, ಡಿಜಿಸಿಎ ಅಧಿಕಾರಿ ರಾಜೇಶ್, ಬಿಸಿಎಎಸ್ ಅಧಿಕಾರಿ ರೈ,
ಸ್ಟಾರ್ ಏರ್ ಸಂಸ್ಥೆಯ ವಿಕ್ರಂ ಚೌಹಾನ್, ಲೋಕೋಪಯೋಗಿ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್, ಐಡಿಡಿ ಹೇಪ್ಶಿಬಾ ರಾಣಿ,ರೈಟ್ಸ್ ಎಜಿಎಂ ರಾಜು, ಚೀಫ್ ಇಂಜಿನಿಯರ್ ಕಾಂತರಾಜ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಸಂಪತ್, ಎಇಇ ಕಿರಣ್ ಮತ್ತಿತರರು ಉಪಸ್ಥಿತರಿದ್ದರು.
Also read: ಡಾ.ಎಸ್.ಜಿ. ಜೈನಾಪೂರ ಅವರ ‘ಅಭಿವ್ಯಕ್ತಿ ಕಲಾ ಸಂಹಿತೆ’ ಕವನ ಸಂಕಲನ ಲೋಕಾರ್ಪಣೆ ಸಂಪನ್ನ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















