ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಅತ್ಯಂತ ಕ್ಷುಲ್ಲಕ ಕಾರಣವೊಂದಕ್ಕೆ ನಗರದಲ್ಲಿ ಹಾಡಹಗಲೇ ಕೊಲೆಯೊಂದು ನಡೆದಿದ್ದು, ನಗರ ಬೆಚ್ಚಿ ಬಿದ್ದಿದೆ. ಟ್ಯಾಂಕ್ ಮೊಹಲ್ಲಾದಲ್ಲಿ ಘಟನೆ ನಡೆದಿದೆ.
ರಾಹಿಲ್ (20) ಕೊಲೆಯಾದ ಯುವಕನಾಗಿದ್ದು, ಅಜ್ಗರ್(19) ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.

ಪ್ರಕರಣದ ಹಿನ್ನೆಲೆಯನು?
ನಿನ್ನೆ ಸಾಯಂಕಾಲ ಆರೋಪಿ ಅಜ್ಗರ್ ತಂದೆ ಟ್ಯಾಂಕ್ ಮೊಹಲ್ಲಾ ರಸ್ತೆಯಲ್ಲಿ ಸೈಕಲ್’ನಲ್ಲಿ ಬರುತ್ತಿದ್ದ ವೇಳೆ ರಾಹಿಲ್’ನ ಬೈಕ್ ಡಿಕ್ಕಿ ಹೊಡೆದಿತ್ತು. ಈ ವೇಳೆ ವಾಗ್ವಾದ ನಡೆದು ರಾಹಿಲನ ಅಜ್ಗರ್ ತಂದೆಗೆ ಹೊಡೆದಿದ್ದ ಎನ್ನಲಾಗಿದೆ. ಸ್ಥಳೀಯರ ಮಧ್ಯಪ್ರವೇಶದಿಂದ ಜಗಳ ನಿಂತಿತ್ತು.

ಆದರೆ, ಇದರ ಹಿನ್ನೆಲೆಯಲ್ಲಿ ರಾಹಿಲ್ ಟ್ಯಾಂಕ್ ಮೊಹಲ್ಲಾದ ೨ನೆಯ ತಿರುವಿನಲ್ಲಿ ನಿಂತಿದ್ದ ವೇಳೆ ಅಜ್ಗರ್ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವ ಉಂಟಾಗಿದ್ದು, ರಾಹಿಲ್’ನಲ್ಲಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಆತ ಮೃತಪಟ್ಟಿದ್ದಾನೆ. ಆರೋಪಿ ಅಜ್ಗರ್’ನನ್ನು ಪೊಲೀಸರು ಬಂಧಿಸಿದ್ದಾರೆ.

ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಡಿವೈಎಸ್’ಪಿ ಪ್ರಶಾಂತ್ ಮುನ್ನೋಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















