ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಅಧಿಕ ಆಶ್ವಯುಜ ಮಾಸದ ಹಿನ್ನೆಲೆಯಲ್ಲಿ ಸೊರಬ ಪಟ್ಟಣದಲ್ಲಿ ನೆಲೆಸಿರುವ ಶ್ರೀ ರಂಗನಾಥ ಸ್ವಾಮಿಯ ಪ್ರೀತ್ಯರ್ಥ ಹಾಗೂ ಲೋಕ ಕಲ್ಯಾಣಾರ್ಥವಾಗಿ 12 ಲಕ್ಷ ಜಪ ಯಜ್ಞವನ್ನು ಆಯೋಜನೆ ಮಾಡಲಾಗಿದ್ದು, ಈಗಾಗಲೇ ಇದು ಆರಂಭವಾಗಿದೆ.
ಸೊರಬ ರಂಗನಾಥ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾದ ಘನಪಾಠಿ, ಜ್ಯೋತಿಷಿ ಶ್ರೀ ನಾರಾಯಣ ಭಟ್ ಅವರ ನೇತೃತ್ವದಲ್ಲಿ, ಕಲ್ಪ ಮೀಡಿಯಾ ಹೌಸ್ ಸಹಯೋಗದಲ್ಲಿ ಜಪಯಜ್ಷ ಆಯೋಜನೆ ಮಾಡಲಾಗಿದೆ. ಅಧಿಕ ಮಾಸದ ಆರಂಭದಿಂದ ಈಗಾಗಲೇ ಜಪಯಜ್ಞ ಆರಂಭವಾಗಿದ್ದು, ಲೋಕ ಕಲ್ಯಾಣಾರ್ಥವಾಗಿ ಆಸಕ್ತ ಭಕ್ತಾದಿಗಳೂ ಸಹ ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ.
ಜಪಯಜ್ಞದ ವಿವರಗಳು ಇಂತಿವೆ:
- ಜಪಯಜ್ಞದಲ್ಲಿ ಜಾತಿ, ಧರ್ಮ, ಭಾಷೆ, ಲಿಂಗ ಬೇಧವಿಲ್ಲದೇ ಯಾರು ಬೇಕಾದರೂ ತಮ್ಮ ಯಥಾನುಶಕ್ತಿ ಜಪ ಮಾಡಬಹುದಾಗಿದೆ.
- ಜಪ ಮಾಡುವುದು ಹೇಗೆ: ನಿಮ್ಮ ಮನೆಯಲ್ಲಿಯೇ ದೇವರಿಗೆ ದೀಪ ಹಚ್ಚಿಟ್ಟು ನಿಮ್ಮ ಶಕ್ತಿ ಅನುಸಾರ ಜಪ ಮಾಡುವುದಾಗಿ ಸಂಕಲ್ಪ ಮಾಡಿಕೊಳ್ಳಿ. ಪ್ರತಿನಿತ್ಯ ಈ ಕೆಳಗೆ ನೀಡಲಾಗಿರುವ ಮಂತ್ರವನ್ನು ಜಪಿಸಿ ಪ್ರತಿದಿನ ಸಂಖ್ಯೆಯನ್ನು ಲೆಕ್ಕ ಇಟ್ಟುಕೊಳ್ಳಿ.
- ಮಂತ್ರ: ‘ಓಂ ನಮೋ ಭಗವತೇ ವಾಸುದೇವಾಯ’
- ಜಪದ ಸಂಖ್ಯೆ ಕಳುಹಿಸುವುದು ಹೇಗೆ? ನೀವು ಪ್ರತಿನಿತ್ಯ ಮಾಡುವ ಜಪದ ಸಂಖ್ಯೆಯನ್ನು ಲೆಕ್ಕ ಇಟ್ಟುಕೊಳ್ಳಿ. ಅಕ್ಟೋಬರ್ 16ರ ಒಳಗಾಗಿ ಈ ಕೆಳಗೆ ನೀಡಲಾಗಿರುವ ಇ ಮೇಲ್ ಐಟಿ ಅಥವಾ ವಾಟ್ಸಪ್ ಸಂಖ್ಯೆಗೆ ನಿಮ್ಮ ಹೆಸರು, ಗೋತ್ರ, ನಕ್ಷತ್ರ, ರಾಶಿ ಹಾಗೂ ಊರಿನ ಹೆಸರನ್ನು ಕಳುಹಿಸಿ. 12 ಲಕ್ಷ ಜಪ ಸಂಪೂರ್ಣವಾದ ನಂತರ ಸೊರಬ ಶ್ರೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ನಡೆಯುವ ವಿಶೇಷ ಪೂಜೆಯ ವೇಳೆ ಎಲ್ಲರ ಹೆಸರು ಹಾಗೂ ವಿವರಗಳನ್ನು ಸಂಕಲ್ಪ ಮಾಡಿ ಶ್ರೀಸ್ವಾಮಿಗೆ ಅರ್ಪಿಸಲಾಗುವುದು.
- ಜಪ ಇಂತಿಷ್ಟೇ ಮಾಡಬೇಕು ಎಂಬುದು ಕಡ್ಡಾಯವಿಲ್ಲ. ನಿಮ್ಮ ಯಥಾನುಶಕ್ತಿ, ಆಸಕ್ತರು ಮಾತ್ರ ಮಾಡಬಹುದಾಗಿದೆ.
- ಕಳುಹಿಸಬೇಕಾದ ವಿವರ: ಮಾಹಿತಿಗಾಗಿ ಸಂಪರ್ಕಿಸಿ: 9481252093 – info@kalpa.news
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post