ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೋವಿಡ್ ಕರ್ಫ್ಯೂ ವೇಳೆಯಲ್ಲಿಯೇ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಿಕೊಂಡು ಬಂದ ವ್ಯಕ್ತಿಯನ್ನು ತಡೆ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಣ್ಣಾನಗರದ ತುಂಗಾ ಚಾನಲ್ ಬಳಿಯಲ್ಲಿ ಇಂದು ಮಧ್ಯಾಹ್ನ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇದೇ ವೇಳೆ ಆ ವ್ಯಕ್ತಿ ಫೋನ್ ಮಾಡಿ ಗೆಳೆಯರನ್ನು ಕರೆಸಿ, ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾನೆ. ಬಳಿಕ ಹರಸಾಹಸ ಪಟ್ಟು ಹೆಲ್ಮೆಟ್ ಹಾಕದವನನ್ನು ಎತ್ತಿ ಪೊಲೀಸರು ಎತ್ತಿಕೊಂಡು ಬಂದು ಜೀಪಿನಲ್ಲಿ ಕೂರಿಸಲು ಯತ್ನಿಸಿದ್ದಾರೆ. ಆದರೆ, ಆತ ಜೀಪಿನಲ್ಲಿ ಕೂರಲು ತಗಾದೆ ತೆಗೆದ ವ್ಯಕ್ತಿಗೆ ಪೊಲೀಸರು ಗೂಸಾ ನೀಡಿದ್ದಾರೆ. ಅಲ್ಲದೇ, ಪೊಲೀಸರ ಮೇಲೆ ಹಲ್ಲೆ ಯತ್ನ ನಡೆಸಿದ ಫಯಾಜ್ ಅಹಮ್ಮದ್ (29)ನನ್ನು ಪೊಲೀಸರು ಹುಡುಕುತ್ತಿದ್ದಾರೆ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post