ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ಆರಂಭವಾಗಿರುವ ಕೊರೋನಾ ಲಸಿಕಾ ಅಭಿಯಾನದಲ್ಲಿ ವ್ಯಾಕ್ಸಿನ್ ಮಾಡಿಸಿಕೊಂಡಿರುವವರಿಗೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಆಗಿಲ್ಲದೇ ಇದ್ದರೂ, ನಿಗದಿತ ಗುರಿ ತಲುಪುವಲ್ಲಿ ಇಲಾಖೆ ತಲುಪಿರುವುದು ಕೇವಲ ಶೇ.51ರಷ್ಟು ಅಷ್ಟೆ.
ಜ.19ರ ಇಂದು ಶಿವಮೊಗ್ಗದಲ್ಲಿ 7 ಆರೋಗ್ಯ ಸಂಸ್ಥೆಗಳಲ್ಲಿ 700 ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಆದರೆ, ಈ ಪೈಕಿ 357 ಆರೋಗ್ಯ ಸಿಬ್ಬಂದಿಗಳು ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಹಾಕಿಸಿಕೊಂಡವರಲ್ಲಿ ಯಾರಿಗೂ ತೀವ್ರತರವಾದ ಅಡ್ಡಪರಿಣಾಮಗಳು ಆಗಿಲ್ಲ. ಆದರೂ, ಶೇ.51 ರಷ್ಟು ಆರೋಗ್ಯ ಸಿಬ್ಬಂದಿಗಳು ಲಸಿಕೆ ಹಾಕಿಸಿಕೊಂಡಿದ್ದಾರೆ.
ಅಲ್ಲದೇ, ಇನ್ನು ಮುಂದಿ ಜನರು ಸ್ವಯಂ ಪ್ರೇರಿತರಾಗಿ ಲಸಿಕೆ ಪಡೆದುಕೊಳ್ಳಬಹುದಾಗಿದೆ ಎಂದವರು ತಿಳಿಸಿದ್ದಾರೆ.









Discussion about this post