ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೋವಿಡ್19 ಲಾಕ್’ಡೌನ್’ನಿಂದಾಗಿ ಸ್ಥಗಿತಗೊಂಡು, ಮರು ಆರಂಭಗೊಂಡಿರುವ ತಾಳಗುಪ್ಪ-ಶಿವಮೊಗ್ಗ-ಬೆಂಗಳೂರು ಇಂಟರ್’ಸಿಟಿ ರೈಲು ಹಾಗೂ ರಾತ್ರಿ ಎಕ್ಸ್’ಪ್ರೆಸ್ ರೈಲುಗಳ ಸಂಚಾರವನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ.
ಈ ಕುರಿತಂತೆ ಇಲಾಖೆ ಆದೇಶ ಹೊರಡಿಸಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಎರಡೂ ರೈಲುಗಳ ಸಂಚಾರವನ್ನು ಮಾರ್ಚ್ 31ರವರೆಗೂ ವಿಸ್ತರಣೆ ಮಾಡಲಾಗಿದೆ.
06227 ಸಂಖ್ಯೆಯ ಮೈಸೂರು-ತಾಳಗುಪ್ಪ ಎಕ್ಸ್’ಪ್ರೆಸ್ ರೈಲು ಸಂಚಾರ ಮಾರ್ಚ್ 31ರವರೆಗೂ ಹಾಗೂ 06228 ಸಂಖ್ಯೆಯ ತಾಳಗುಪ್ಪ-ಮೈಸೂರು ಎಕ್ಸ್’ಪ್ರೆಸ್ ರೈಲು ಸಂಚಾರವನ್ನು ಎಪ್ರಿಲ್ 1ರವರೆಗೂ ವಿಸ್ತರಣೆ ಮಾಡಲಾಗಿದೆ.
06530 ಸಂಖ್ಯೆಯ ತಾಳಗುಪ್ಪ-ಬೆಂಗಳೂರು ಇಂಟರ್’ಸಿಟಿ ರೈಲು ಸಂಚಾರವನ್ನು ಮಾರ್ಚ್ 30ರವರೆಗೂ ಹಾಗೂ 06529 ಸಂಖ್ಯೆಯ ಬೆಂಗಳೂರು-ತಾಳಗುಪ್ಪ ಇಂಟರ್’ಸಿಟಿ ರೈಲು ಸಂಚಾರವನ್ನು ಮಾರ್ಚ್ 31ರವರೆಗೂ ವಿಸ್ತರಣೆ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















