ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಉಡುಪಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರ ಪ್ರಥಮ ಆರಾಧನಾ ಮಹೋತ್ಸವ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜರುಗಿತು.
ಗುರುಗಳ ಆರಾಧನೆಯ ನಿಮಿತ್ತ ಶ್ರೀಮಠದಲ್ಲಿ ಮುಂಜಾನೆಯಿಂದಲೇ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಹಾಗೂ ಮೃತ್ತಿಕ ಗುರುರಾಜಾಚಾರ್ ಅವರಿಂದ ಶ್ರೀಗಳ ಕುರಿತಾಗಿನ ಪ್ರವಚನ ಕಾರ್ಯಕ್ರಮ ಹಾಗೂ ಪ್ರಾಕಾರದಲ್ಲಿ ಮೆರವಣಿಗೆ ನಡೆಯಿತು.
ಪೇಜಾವರ ಶ್ರೀಗಳ ಶಿಷ್ಯರಾದ ಪ್ರಮೋದ್ ಕುಮಾರ್, ಶ್ರೀನಿಧಿ, ನಾಗರಾಜ್ ಉಪಾಧ್ಯಾಯ, ಪವನ್ ಕುಮಾರ್ ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಿದರು. ಗುರುರಾಜ ಸೇವಾ ಸಮಿತಿಯ ಅಧ್ಯಕ್ಷ ಮುರಳೀಧರ್, ಸತ್ಯನಾರಾಯಣಾಚಾರ್, ಶ್ರೀನಿವಾಸಚಾರ್, ಗೋಪಾಲಾಚಾರ್, ನಿರಂಜನ್ ಆಚಾರ್ ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















