ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈ ಬಾರಿ 400ಕ್ಕೂ ಮೀರಿ ಬಿಜೆಪಿಗೆ ಸೀಟು, ಈ ಬಾರಿ 400ಕ್ಕೂ ಮೀರಿ ಬಿಜೆಪಿಗೆ ಸೀಟು… ಇದು ಪ್ರಧಾನಿ ನರೇಂದ್ರ ಮೋದಿ #PMNarendraModi ಅವರು, ಶಿವಮೊಗ್ಗದಲ್ಲಿ ಕನ್ನಡದಲ್ಲೇ ಮನವಿ ಮಾಡಿದ ಪರಿ.
ಹೌದು… ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಫ್ರೀಡಂ ಪಾರ್ಕ್’ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಿಂದ 28ಕ್ಕೆ 28 ಸ್ಥಾನಗಳನ್ನೂ ದೇಶದಲ್ಲಿ 400ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಲು ಮತ ನೀಡಬೇಕು ಎಂದು ವಿನಂತಿ ಮಾಡಿದರು.
ಪ್ರಮುಖವಾಗಿ ಈ ಬಾರಿ 400ಕ್ಕೂ ಮೀರಿ ಬಿಜೆಪಿಗೆ ಸೀಟು, ಈ ಬಾರಿ 400ಕ್ಕೂ ಮೀರಿ ಬಿಜೆಪಿಗೆ ಸೀಟು ಎಂದು ಕನ್ನಡದಲ್ಲೇ ಮನವಿ ಮಾಡಿದ್ದು ವಿಶೇಷವಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post