ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರೀ ಮಳೆಯ ಪರಿಣಾಮವಾಗಿ ಕೊಮ್ಮನಾಳು ಹಾಗೂ ಆಗಸವಳ್ಳಿಗಳಲ್ಲಿ ಮನೆಗಳು ಕುಸಿತಗೊಂಡಿದ್ದು, ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಿವಮೊಗ್ಗ ತಾಲೂಕಿನ ಆಗಸವಳ್ಳಿಯ ಗೌಳಿ ನಗರದಲ್ಲಿ ಇಂದು ನಸುಕಿನಲ್ಲಿ ಮನೆ ಕುಸಿದಿದೆ. ಈ ವೇಳೆ ಮನೆಯಲ್ಲಿ ಮಲಗಿದ್ದ ಮೂವರು ತೀವ್ರವಾಗಿ ಗಾಯಗೊಂಡಿದ್ದು, ಇವರನ್ನೆಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಮ್ಮನಾಳ್ ತಾಂಡಾದಲ್ಲಿ ಮನೆ ಕುಸಿತ
ಇನ್ನು, ಕೊಮ್ಮನಾಳ್ ಗ್ರಾಮದ ತಾಂಡಾದಲ್ಲಿ ಭಾರೀ ಮಳೆಯ ಪರಿಣಾಮ ಕೆಲವು ಮನೆಗಳು ಸಂಪೂರ್ಣ ಕುಸಿದಿದ್ದು, ಅಪಾರ ಹಾನಿ ಸಂಭವಿಸಿದೆ.
ಮನೆಗಳು ಕುಸಿದ ಪ್ರದೇಶಕ್ಕೆ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.


 
	    	


 Loading ...
 Loading ... 
							



 
                
Discussion about this post