ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಾಚೇನಹಳ್ಳಿ ಕೈಗಾರಿಕಾ ಸಂಘಕ್ಕೆ ನೀಡಿದ ಧನಸಹಾಯವನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದು ಉದ್ಯಮಿ ಎಸ್. ರುದ್ರೇಗೌಡ ಹೇಳಿದರು.
ಈ ಕುರಿತಂತೆ ಮಾತನಾಡಿದ ಅವರು, ಮಾಚೇನಹಳ್ಳಿ ಕೈಗಾರಿಕಾ ಸಂಘದ ಬೆಳ್ಳಿ ಮಹೋತ್ಸವ ಕಟ್ಟಡಕ್ಕೆ 5 ಕೋಟಿ ರೂ.ಧನಸಹಾಯ ಮಾಡಿದ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿನಂದನಗಳು. ಈ ಹಣವನ್ನು ಸಂಘವು ಸದ್ಬಳಕೆ ಮಾಡಿಕೊಳ್ಳಲಿದೆ ಎಂದರು.
ಮಾಚೇನಹಳ್ಳಿ ಕೈಗಾರಿಕಾ ಸಂಘದ ಸಂಪೂರ್ಣ ಅಭಿವೃದ್ದಿಗೆ ಸಿಎಂ ಹಾಗೂ ಸಂಸದರು ಸಹಕಾರ ನೀಡುತ್ತಲೇ ಬಂದಿದ್ದಾರೆ. ಸಂಸದರ ಪ್ರಯತ್ನದಿಂದ ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ವ್ಯಾಪ್ತಿಗೆ ಸೇರಿಸಿರುವುದರಿಂದ ಸಂಘ ಮತ್ತಷ್ಟು ಕೆಲಸ ಮಾಡಲು ಸಾಧ್ಯವಾಗುತ್ತಿದೆ ಎಂದರು.
ಕೈಗಾರಿಕಾ ಸಂಘದ 25ನೆಯ ವರ್ಷದ ಅಂಗವಾಗಿ ಒಂದು ಸುಸಜ್ಜಿತ 500 ಆಸನಗಳ ಆಡಿಟೋರಿಯಂ ನಿರ್ಮಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಸುಮಾರು 6 ಕೋಟಿ ರೂ. ಖರ್ಚಾಗುವ ನಿರೀಕ್ಷೆ ಇದೆ. ಸಂಸದರ ನೆರವು ಕೂಡ ಬಂದಿದೆ. ಇದರ ಜೊತೆಗೆ ಕೌಶಲಾಭಿವೃದ್ದಿ, ನವೀನ ಉತ್ಪನ್ನಗಳ ಪ್ರದರ್ಶನ ಸೇರಿದಂತೆ ಹಲವು ಅಗತ್ಯ ಸೇವೆಗಳನ್ನು ನೀಡಲಾಗುವುದು ಎಂದರು.
ಮಾಚೇನಹಳ್ಳಿ ಕೈಗಾರಿಕಾ ವಲಯವು 865 ಎಕರೆ ಜಾಗ ಹೊಂದಿದೆ. ಇದರಲ್ಲಿ 365 ಎಕರೆ ಜಾಗದಲ್ಲಿ ಉತ್ಪಾದನಾ ಘಟಕ ಗಳಿವೆ. ಸುಮಾರು 300 ಎಕರೆ ಗಾರ್ಮೇಂಟ್ಸ್ ಜಾಗವಿದೆ. 12 ಸಾವಿರ ಕಾರ್ಮಿಕರಿದ್ದಾರೆ. 150 ಕೋಟಿ ರೂ. ತೆರಿಗೆ ರೂಪದಲ್ಲಿ ನೀಡುತ್ತಿದ್ದೇವೆ. ಭದ್ರಾವತಿ ನಗರಸಭೆಗೆ ಪ್ರತಿ ವರ್ಷ 1 ಕೋಟಿ ರೂ.ಗೂ ಹೆಚ್ಚು ತೆರಿಗೆ ಕಟ್ಟುತ್ತಿದ್ದೇವೆ. ಸಾವಿರಾರು ಯುವಕರಿಗೆ ಕೆಲಸ ಕೊಟ್ಟಿದ್ದೇವೆ. ಜಿಲ್ಲೆಯ ಆರ್ಥಿಕಾಭಿವೃದ್ದಿಯಲ್ಲಿ ತನ್ನದೇ ಪಾತ್ರ ಕೈಗಾರಿಕಾ ವಲಯ ವಹಿಸಿದ್ದು, ಸುಮಾರು 20 ದೇಶಗಳಿಗೆ ಇಲ್ಲಿನ ಉತ್ಪನ್ನಗಳು ರಫ್ತಾಗುತ್ತಿವೆ ಎಂದರು.
ಇಂತಹ ಬಹುದೊಡ್ಡ ಕೈಗಾರಿಕಾ ವಲಯಕ್ಕೆ ಮೂಲಭೂತ ಸೌಕರ್ಯಕ್ಕಾಗಿ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮದೇ ಆದ ಕೊಡುಗೆ ನೀಡಿವೆ. ಈಗಾಗಲೇ ವಿಮಾನ ನಿಲ್ಧಾಣದ ಕೆಲಸ ನಡೆಯುತ್ತಿವೆ. ಇದಾದ ನಂತರ ಮತ್ತಷ್ಟು ಕೈಗಾರಿಕೆಗಳು ಜಿಲ್ಲೆಗೆ ಬರುತ್ತವೆ ಎಂದರು.
ಬಹುಮುಖ್ಯವಾಗಿ ಇಲ್ಲೊಂದು ಕೈಗಾರಿಕಾ ಟೌನ್‌ಶಿಪ್ ಪ್ರಾರಂಭಿಸುವ ಉದ್ಧೇಶ ಹೊಂದಲಾಗಿದೆ. ಸುಮಾರು 18 ಸಾವಿರ ಕಾರ್ಮಿಕರ ಹಿತದೃಷ್ಟಿಯನ್ನಿಟ್ಟುಕೊಂಡು ರಸ್ತೆ, ನೀರು, ವಿದ್ಯುತ್ ಹೀಗೆ ಮೂಲಭೂತ ಸೌಲಭ್ಯಗಳೊಡನೆ ಕೆಲಸಗಾರರಿಗೆ ಅನುಕೂಲವಾಗುವಂತೆ ಇದು ನಿರ್ಮಾಣವಾಗಲಿದೆ ಸರ್ಕಾರ ಇದಕ್ಕೂ ಕೂಡ ಸಹಕಾರ ನೀಡಲಿದೆ ಎಂದರು.
ಸಂಘ ಕಳೆದ 25 ವರ್ಷಗಳಿಂದ ಹಲವು ಅಭಿವೃದ್ದಿ ಕೆಲಸಗಳನ್ನು ಮತ್ತು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ. ಮಾಚೇನಹಳ್ಳಿಯ ಕೈಗಾರಿಕಾ ವಲಯದಲ್ಲಿ ಸುಮಾರು 15 ಕೋಟಿ ರೂ.ಗಳ ವೆಚ್ಚದಲ್ಲಿ ಮರಳಿನ ಮರುಬಳಕೆ ಘಟಕ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಇಲ್ಲಿ ಕೈಗಾರಿಕೆಗಳು ಬಳಸಿದ ಮರಳು ಉಪಯೋಗಕ್ಕೆ ಬರುತ್ತಿರಲಿಲ್ಲ. ಆದರೆ ಆಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಬಳಸಿಕೊಂಡು ಆ ಮರಗಳನ್ನು ಮತ್ತೆ ಮರು ಬಳಕೆ ಮಾಡಿಕೊಳ್ಳಬಹುದು. ಇದಕ್ಕಾಗಿ ಈಗಾಗಲೇ ಸುಮಾರು 1.6 ಎಕರೆ ಜಾಗ ಗುರುತಿಸಲಾಗಿದೆ ಎಂದರು.
ಸಂಘದ ಅಧ್ಯಕ್ಷ ಎಂ.ಎ. ರಮೇಶ್ ಹೆಗ್ಡೆ ಮಾತನಾಡಿ, ಮಾಚೇನಹಳ್ಳಿ ಕೈಗಾರಿಕಾ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗಾಗಿ 50 ಎಕರೆ ಜಾಗವನ್ನು ವಸತಿ ನಿವೇಶನಕ್ಕಾಗಿ ನೀಡುವಂತೆ ಸ್ಬೂಡಾ ಅಧ್ಯಕ್ಷರಿಗೆ ಮನವಿ ಮಾಡಿದ್ದು ಅದಕ್ಕೆ ಅವರು ಸ್ಪಂದಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸ್ಬೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಸಂಘದ ಕಾರ್ಯದರ್ಶಿ ಜಿ.ವಿ. ಕಿರಣ್ ಕುಮಾರ್, ಕಾಸಿಯ ನಿರ್ದೇಶಕ ವಿಶ್ವೇಶ್ವರಯ್ಯ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post