ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ರೈಲ್ವೆ ಟರ್ಮಿನಲ್ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಿಲ್ಲ, ರಿಯಲ್ ಎಸ್ಟೇಟ್ ಮಾಫಿಯಾ ಇದರಲ್ಲಿ ಕೆಲಸ ಮಾಡಿಲ್ಲ ಎಂದು ಕಾಂಗ್ರೆಸ್ ಮುಖಂಡ ತೀನಾಶ್ರೀ ಹೇಳಿಕೆಗೆ ಸಂಸದ ಬಿ.ವೈ. ರಾಘವೇಂದ್ರ ತಿರುಗೇಟು ನೀಡಿದರು.

ಈ ಕುರಿತಂತೆ ಮಾತನಾಡಿದ ಅವರು, ಟರ್ಮಿನಲ್’ಗೆ ರೈಲ್ವೆ ಇಲಾಖೆ ತಾಳಗುಪ್ಪ ಹಾಗೂ ಕೋಟೆ ಗಂಗೂರನ್ನು ಗುರುತಿಸಿತ್ತು. ಆದರೆ, ಇದರಲ್ಲಿ ಜಿಲ್ಲಾ ಕೇಂದ್ರಕ್ಕೆ ಹತ್ತಿರವಾಗಿರುವ ಕೋಟೆ ಗಂಗೂರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಟರ್ಮಿನಲ್ ಒಂದು ತಾಲೂಕಿನ ಸೀಮಿತವಾಗಿಲ್ಲ. ಇದರಲ್ಲಿ ಯಾವುದೇ ರೀತಿಯಲ್ಲೂ ಸಹ ರಾಜಕೀಯ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ 220 ಕೋಟಿ ರೂ. ವೆಚ್ಚ ಮಾಡಿ ತಾಳಗುಪ್ಪ ಬ್ರಾಡ್’ಗೇಜ್ ಮಾಡಲಾಗಿತ್ತು. ಇದು ತಾಳಗುಪ್ಪವರೆಗೂ ಬಹಳಷ್ಟು ರೈಲುಗಳು ಸಂಚರಿಸಲು ಹಾಗೂ ಆ ಮೂಲಕ ಇಲ್ಲಿನ ಜನರ ಸಂಪರ್ಕ, ವ್ಯವಹಾರ ಹಾಗೂ ಪ್ರವಾಸೋದ್ಯಮಕ್ಕೆ ಪೂರಕವಾಗಿದೆ. ಇದೇ ರೀತಿಯಲ್ಲಿ ಜಿಲ್ಲೆಯಲ್ಲಿ ರೈಲ್ವೆಯ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಲಾಗುತ್ತಿದೆ. ಆದರೆ, ಇದನ್ನು ಪೂರ್ಣವಾಗಿ ತಿಳಿದುಕೊಳ್ಳದೇ ಆರೋಪ ಮಾಡುವುದು ಸರಿಯಲ್ಲ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















