ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಒಂದೆಡೆ ಸಾರಿಗೆ ನೌಕರರ ಮುಷ್ಕರ ಆರಂಭವಾಗಿರುವ ಬೆನ್ನಲ್ಲೇ ಮಲೆನಾಡಿನ ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿಯನ್ನು ಇಲಾಖೆ ನೀಡಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ತಾಳಗುಪ್ಪ-ಮೈಸೂರು-ತಾಳಗುಪ್ಪ ನಡುವೆ ಎ.10ರಿಂದ ನೂತನ ವಿಶೇಷ ಎಕ್ಸ್’ಪ್ರೆಸ್ ರೈಲು ಸಂಚಾರ ಆರಂಭವಾಗಲಿದೆ ಎಂದಿದೆ.
ಹೀಗಿದೆ ವೇಳಾಪಟ್ಟಿ:
ಎ.10ರಂದು ಬೆಳಗ್ಗೆ 10.15 ಕ್ಕೆ ಮೈಸೂರಿನಿಂದ ಹೊರಡಲಿರುವ 06225 ಸಂಖ್ಯೆಯ ರೈಲು ಸಂಜೆ 3.35 ಕ್ಕೆ ಶಿವಮೊಗ್ಗ ತಲುಪಲಿದ್ದು, ಸಂಜೆ 6 ಗಂಟೆಗೆ ತಾಳಗುಪ್ಪ ತಲುಪಲಿದೆ. ಮರುದಿನ ಬೆಳಿಗ್ಗೆ 8.45 ಕ್ಕೆ ತಾಳಗುಪ್ಪದಿಂದ ಹೊರಡಲಿರುವ 06226 ಸಂಖ್ಯೆಯ ರೈಲು, 10.55ಕ್ಕೆ ಶಿವಮೊಗ್ಗ ತಲುಪಿ, 11.10ಕ್ಕೆ ಅಲ್ಲಿಂದ ಹೊರಟು ಸಂಜೆ 4.50ಕ್ಕೆ ಮೈಸೂರು ತಲುಪಲಿದೆ.
ಎಲ್ಲೆಲ್ಲಿ ನಿಲುಗಡೆ?
ಮೈಸೂರು, ಕೆ.ಆರ್. ನಗರ, ಬೀರನಹಳ್ಳಿ, ಮಂದಕೆರೆ, ಹೊಳೆನರಸೀಪುರ, ಹಾಸನ, ಬಾಣಾವರ, ದೇವನೂರು, ಕಡೂರು, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಹಳೇ ನಿಲ್ದಾಣ, ಶಿವಮೊಗ್ಗದ ಹೊಸ ನಿಲ್ದಾಣ, ಹಾರನಹಳ್ಳಿ, ಕುಂಸಿ, ಅರಸನಾಳು, ಆನಂದಪುರಂ, ಸಾಗರ ಜಂಬಗಾರು ಹಾಗು ತಾಳಗುಪ್ಪ.
ಟಿಕೇಟ್ ದೊರೆಯುವುದು ಹೇಗೆ?
ನಿಲ್ದಾಣಗಳಲ್ಲಿ ಸಾಮಾನ್ಯ ಟಿಕೇಟ್ ದೊರೆಯಲಿದ್ದು, ಯಾವುದೇ ರೀತಿಯ ರಿಯಾಯ್ತಿಗಲು ಈ ವಿಶೇಷ ರೈಲು ಟಿಕೇಟ್’ನಲ್ಲಿ ದೊರೆಯುವುದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post