ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೇಂದ್ರ ಕಾರಾಗೃಹದಲ್ಲಿ ಶಿಕ್ಷಾ ಬಂಧಿ ಅಲ್ಲಿನ ಶೌಚಾಲಯದಲ್ಲಿ ನೇಣು ಬಿಗಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮಂಜುನಾಥ್ 33 ಆತ್ಮಹತ್ಯೆ ಮಾಡಿಕೊಂಡ ಖೈದಿ ಸಾಗರದ ಎಸ್’ಎಸ್ ಕಾಲೋನಿ ನಿವಾಸಿ ಎಂದು ವರದಿಯಾಗಿದೆ.
ನಿನ್ನೆ ಸಂಜೆ ಜೈಲಿನ ತುಂಗಾ ವಿಭಾಗದ ರೂಂ ನಂಬರ್ 35 ರ ಶೌಚಾಲಯದಲ್ಲಿ ಟವಲ್ ನಿಂದ ಮಂಜು ನೇಣು ಬಿಗಿದುಕೊಂಡಿದ್ದಾನೆ. ತತಕ್ಷಣ ಜೈಲು ಸಿಬ್ಬಂದಿಗಳು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಇಂದು ನ್ಯಾಯಾಧೀಶರ ಸಮ್ಮುಖದಲ್ಲಿ ಪಂಚನಾಮೆ, ಶವಪರೀಕ್ಷೆ ನಡೆಸಲಾಗಿದ್ದು, ಎಲ್ಲವನ್ನೂ ವೀಡಿಯೋ ಚಿತ್ರೀಕರಣ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















