ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸಮಾಜದಲ್ಲಿ ಮಾನಸಿಕ ಆರೋಗ್ಯ ಸಾಹಿತ್ಯವನ್ನು ಬೆಳೆಸುವಲ್ಲಿ ಸಲ್ಲಿಸಿರುವ ದೀರ್ಘ ಸೇವೆಯನ್ನು ಗುರುತಿಸಿ, ಮನೋವೈದ್ಯ ಸಾಹಿತಿ ಡಾ. ಕೆ.ಆರ್.ಶ್ರೀಧರ್ ಅವರಿಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಪ್ರತಿಷ್ಠಿತ ರಾಜ್ಯ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ.
ಧಾರವಾಡದಲ್ಲಿ ಫೆ.28ರಂದು ನಡೆಯುವ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. 5 ದಶಕಗಳಿಂದ ಮಾನಸಿಕ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾ. ಶ್ರೀಧರ್ ಅವರ ನಿಸ್ವಾರ್ಥ ಮತ್ತು ಪ್ರಾಮಾಣಿಕ ಸೇವೆಗೆ ಸಂದಿರುವ ಮನ್ನಣೆ ಇದಾಗಿದ್ದು, ಮಕ್ಕಳ ಸಮುದಾಯದ ಮಾನಸಿಕ ಆರೋಗ್ಯ-ಸಾಹಿತ್ಯ ಎಂಬ ಕ್ಷೇತ್ರಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.









Discussion about this post