ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ರಾಜ್ಯದ ಈಡಿಗ ಸಮುದಾಯದ ಅಭಿವೃದ್ಧಿ ನಿಗಮ ರಚನೆ ಮಾಡಿ ಎಂದು ಶಾಸಕ, ಎಂಎಸ್’ಐಎಲ್ ಅಧ್ಯಕ್ಷ ಎಚ್. ಹಾಲಪ್ಪ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಅವರು, ರಾಜ್ಯದಲ್ಲಿ ಹಿಂದುಳಿದ ವರ್ಗದ ಈಡಿಗ, ನಾಮದಾರಿ, ಬಿಲ್ಲವ, ಪೂಜಾರಿ ಸೇರಿ ಒಟ್ಟು 26 ಉಪಪಂಗಡಗಳನ್ನು ಆರ್ಯ ಈಡಿಗ ಸಮುದಾಯ ಹೊಂದಿದ್ದು, ರಾಜ್ಯದಾದ್ಯಂತ ಈ ಜನರ ನೆಲೆಸಿದ್ದಾರೆ. ರಾಜಕೀಯವಾಗಿ ನೋಡುವುದಾದರೆ ರಾಜ್ಯದಲ್ಲಿ ಪ್ರಸ್ತುತ ಈಡಿಗ ಸಮುದಾಯದ ಆರು ವಿಧಾನಸಭಾ ಸದಸ್ಯರು, ಮೂವರು ವಿಧಾನ ಪರಿಷತ್ ಸದಸ್ಯರಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post