ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ವಿಶ್ವ ಹಿಂದೂ ಪರಿಷತ್ ಹಾಗೂ ಶಕ್ತಿ ದೇವತೆಗಳ ಸಮಾಗಮ ಸಮಿತಿ ವತಿಯಿಂದ 22ನೆಯ ವರ್ಷದ ಶಕ್ತಿ ದೇವತೆಗಳ ಸಮಾಗಮ ಜ.13ರ ನಾಳೆ ನಡೆಯಲಿದೆ.
ಕೋಟೆ ಸೀತಾ ರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, 12 ಗಂಟೆ ವೇಳೆಗೆ ಅಲಂಕೃತ ಶಕ್ತಿ ದೇವತೆಗಳನ್ನು ಇಲ್ಲಿಗೆ ತರಲಾಗುತ್ತದೆ. 12.30ಕ್ಕೆ ಸಮಾಗಮ ಪೂಜೆ ಮತ್ತು ಉದ್ಘಾಟನಾ ಸಮಾರಂಭ ನಡೆಯಲಿದ್ದು, 1 ಗಂಟೆಯವರೆಗೂ ಭಜನಾ ಕಾರ್ಯಕ್ರಮ, 1.15ಕ್ಕೆ ಶ್ರೀ ಅನ್ನಪೂರ್ಣೇಶ್ವರಿ ಆರಾಧನಾ ಸಮಾರಂಭ, ಸಂಜೆ 4.30ರಿಂದ 6.30ರವರೆಗೂ ಮಡಲಕ್ಕಿ ಸಮರ್ಪಣೆ, ಮಹಾಮಂಗಳಾರತಿ ನಡೆಯಲಿದ್ದು, ದೀಪಾರಾಧನೆ ನಂತರ ನಂತರ ದೇವಾಲಯಗಳಿಗೆ ಹೊರಡಲಿದೆ.
ಶ್ರೀ ಶಕ್ತಿ ದೇವತೆಗಳ ಸಮಾಗಮದ ಪ್ರಸಾದ ವಿನಿಯೋಗಕ್ಕೆ ಭಕ್ತರು ಅಕ್ಕಿ, ತೆಂಗಿನಕಾಯಿ, ಬೆಲ್ಲ, ಬಾಳೆಎಲೆ, ಧನ ನೆರವು ನೀಡಬಹುದಾಗಿದೆ. ಮಾಹಿತಿಗಾಗಿ 9980316033, 9902232235, 9844252044, 9945861358ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post