ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪಕ್ಷ ಮುಖ್ಯವೋ, ಜನಪ್ರತಿನಿಧಿ ಮುಖ್ಯವೋ ಎಂಬ ಪ್ರಶ್ನೆ ಚುನಾವಣೆ ಸಮಯ ಬಂದಾಗ ಜನ ಪ್ರತಿನಿಧಿಯೇ ಮುಖ್ಯ ಎಂಬುದು ಸಾಬೀತು ಪಡಿಸಿರುವುದು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸತತವಾಗಿ ಮೂರು ಬಾರಿ ಗೆದ್ದು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಎಲ್ಲಾ ಕಾರ್ಪೊರೇಟರ್ಸಗಳ ಮನ ಗೆದ್ದಿರುವ ಎಚ್.ಸಿ. ಯೋಗೇಶ್ ಅವರೇ ಸಾಕ್ಷಿ.
ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ ಆಯ್ದ ನೂರು ಜನರಿಗೆ ಒಂದೊಂದರಂತೆ ಪ್ರತಿ 3.5 ಚದರ ಅಡಿ ಮನೆಯನ್ನು ಕಟ್ಟಲು ಸುಮಾರು ರೂ. 5 ಲಕ್ಷ ರೂ. ವೆಚ್ಚವಾಗಲಿದ್ದು ರೂ. 5 ಕೋಟಿ ರೂ. ಮೊತ್ತವನ್ನು ಕಾಯ್ದಿರಿಸಲಾಗಿದೆ. ಇದನ್ನು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ನಿಗಮದ ಮೂಲಕ ನಮ್ಮ ಮಹಾನಗರ ಪಾಲಿಕೆಯ ಸಹ ಭಾಗಿತ್ವದೊಂದಿಗೆ ಈ ಒಳ್ಳೆಯ ಕಾರ್ಯ ಮಾಡುವುದು, ಆಗಲೇ ಆ ಮನೆಗಳ ಫಲಾನುಭವಿಗಳು ಮತ್ತು ಮನೆ ನಿರ್ಮಿಸುವ ಸ್ಥಳ ನಿಗದಿಪಡಿಸಿರುವುದು ಶ್ಲಾಘನೀಯವೇನೋ ನಿಜ.
ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಮಾಡಿದ್ದು ಮನವಿ ಈಗ ಪುರಸ್ಕೃತವಾಗಿ ಕಾರ್ಯರೂಪಕ್ಕೆ ಬಂದಾಗ ಈಗಲೂ ಕಾಂಗ್ರೆಸ್ ಪಕ್ಷದಿಂದ ಗೆದ್ದು ಪ್ರಸ್ತುತ ಮಹಾನಗರ ಪಾಲಿಕೆಯಲ್ಲಿ ವಿರೋಧ ಪಕ್ಷದ ನಾಯಕರಾದ ಎಚ್.ಸಿ. ಯೋಗೇಶ್ ಕಾರ್ಪೊರೇಟರ್ ಕಾರ್ಯಕ್ರಮದ ಉದ್ಘಾಟನೆಗೆ ಆಡಳಿತ ಪಕ್ಷದವರನ್ನು ಕರೆದರೂ ಮನವಿಗೆ ಸ್ಪಂದಿಸದಿರುವುದು ವಿಷಾದನೀಯ!!!
ಮನೆಗಳನ್ನು ಕಟ್ಟಲು ನಿಗದಿಪಡಿಸಿದ ಸ್ಥಳವಿರುವುದು ನಗರದ ನಾಲ್ಕನೆಯ ವಾರ್ಡು!!! ಮಲ್ಲಿಕಾರ್ಜುನ ನಗರ, ಅಲ್ಲಿಯ ಎಚ್.ಎಂ. ಮಹಾದೇವ, 4ನೆಯ ವಾರ್ಡನ್ ಕಾಂಗ್ರೆಸ್ ಅಧ್ಯಕ್ಷ. ಬಹುಶಃ ಈ ಕಾರಣದಿಂದಲೋ ಇನ್ಯಾವುದೋ ಕಾರಣಕ್ಕೋ ಮೇಯರ್ ಆಗಲೀ ಉಪ ಮೇಯರ್ ಆಗಲೀ, ಆಯುಕ್ತರಾಗಲೀ, ಬಿಜೆಪಿ ಚುನಾಯಿತ ಯಾವ ಪ್ರತಿನಿಧಿಯೂ ಮನೆಗಳ ನಿರ್ಮಾಣದ ಪ್ರಥಮ ಕಾರ್ಯ ಗುದ್ದಲಿ ಪೂಜೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವುದು ನೋಡಿದರೆ ರಾಜಕೀಯ ಅಂದ್ರೇ ಇದೇನಾ…
ಮನೆ ನಿರ್ಮಾಣ ಕಾರ್ಯಕ್ರಮದ ಮೊದಲ ಹಂತವಾಗಿ ಎಚ್.ಸಿ. ಯೋಗೇಶ್ ಗುದ್ದಲಿಪೂಜೆ ಮಾಡುವ ಮೂಲಕ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಎಚ್.ಸಿ. ಯೋಗೇಶ್ ಅವರಿಗೆ ಸಹಕಾರ ನೀಡಬಹುದಿತ್ತು, ಆ ಮೂಲಕ ಬಿಜೆಪಿ ದೊಡ್ಡತನ ಮೆರೆಯಬಹುದಿತ್ತು!!!
ಬರಹ: ವೈ.ಎಸ್. ಶ್ರೀಧರ್ ಜೋಯ್ಸ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post