ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪನಿಯು ಮಾಡೆಲ್ ಸಬ್ ಡಿವಿಜನ್ ಯೋಜನೆಯಡಿ ಕೇಬಲ್ ಅಳವಡಿಕೆ ಕಾರ್ಯ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಡಿ.8 ಹಾಗೂ 9ರಂದು ನಗರದ ಹಲವು ಕಡೆ ವಿದ್ಯುತ್ ವ್ಯತ್ಯಯವಾಗಲಿದೆ.
ಡಿ.8ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಶಂಕರಮಠ ಹಿಂಭಾಗದ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶ. ಮಿಷನ್ ಕಾಂಪೌಂಡ್, ಜ್ಯೂವೆಲ್ ರಾಕ್, ಜೆ.ಪಿ.ಎನ್ ರಸ್ತೆ, ದುರ್ಗಿಗುಡಿ ಪ್ಯಾರಲಲ್ ರಸ್ತೆ, ಜೈಲ್ ವೃತ್ತ, ಜ್ಯೋತಿ ಗಾರ್ಡನ್, ಆಕಾಶ್ ಇನ್, ಬಿಜೆಪಿ ಕಚೇರಿ, ಸಿಮ್ಸ್ ಮೆಡಿಕಲ್ ಕಾಲೇಜು ಸುತ್ತ ಮುತ್ತಲಿನ ಪ್ರದೇಶ.
ಡಿ.9ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಶೇಷಾದ್ರಿಪುರಂ ನ್ಯಾಷನಲ್ ಸ್ಕೂಲ್, ಶಿವಮೊಗ್ಗ ರೈಸ್‌ಮಿಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂನ ಸಹಾಯಕ ಕಾರ್ಯನಿವಾಹಕ ಅಭಿಯಂತರರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















