ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನನ್ನ ಪತ್ನಿ ಉರ್ದು ಕಲಿತು, ಕನ್ನಡದೊಂದಿಗೆ ಆ ಭಾಷೆಯನ್ನೂ ಸಹ ಮಕ್ಕಳಿಗೆ ಕಲಿಸಿದ್ದಾಳೆ. ಆದರೆ, ಪಾಠ ಕಲಿತ ಮಕ್ಕಳೇ ಈಗ ನಮ್ಮ ಮನೆ ಮೇಲೆ ಕಲ್ಲು ಹೊಡೆದು, ದಾಳಿ ನಡೆಸಿದ್ದಾರೆ… ಇದು ಕಣ್ಣೀರು ಹಾಕಿದ್ದು ದುಷ್ಕರ್ಮಿಗಳಿಂದ ಕಲ್ಲು ದಾಳಿಗೆ ಒಳಗಾದ ನಿವೃತ್ತ ಶಿಕ್ಷಕ ದಂಪತಿ ಅಳಲು.
ರಾಗಿಗುಡ್ಡದಲ್ಲಿ Shivamogga Raagigudda ದುಷ್ಕರ್ಮಿಗಳಿಂದ ಕಲ್ಲು ತೂರಾಟ ಹಾಗೂ ದಾಳಿಗೆ ಒಳಗಾದ ಮನೆಗಳಿಗೆ ಇಂದು ಭೇಟಿ ನೀಡಿದ ಬಿಜೆಪಿ ಸತ್ಯ ಶೋಧನಾ ಸಮಿತಿಯ ಮುಂದೆ ನಿವೃತ್ತ ಶಿಕ್ಷಕ ದಂಪತಿ ಅಳಲು ತೋಡಿಕೊಂಡಿದ್ದಾರೆ.
ನನ್ನ ಪತ್ನಿ ಶಿಕ್ಷಕಿಯಾದ ನಂತರ ಉರ್ದು ಕಲಿತು ಕನ್ನಡದೊಂದಿಗೆ ಆ ಭಾಷೆಯನ್ನೂ ಸಹ ಇಲ್ಲಿನ ಮಕ್ಕಳಿಗೆ ಕಲಿಸಿದ್ದಾಳೆ. ಆದರೆ, ಆಗ ಕಲಿತವರೇ ಈಗ ನಮ್ಮ ಮನೆಯ ಮೇಲೆ ದಾಳಿ ನಡೆಸಿದ್ದಾರೆ ಎಂಬುದು ನಮಗೆ ದುಃಖದ ಸಂಗತಿ ಎಂದಿದ್ದಾರೆ.
Also read: ಸಾಲುಮರದ ತಿಮ್ಮಕ್ಕ ಆರೋಗ್ಯ ಸ್ಥಿರ | ವದಂತಿ ಹಬ್ಬಿಸದಂತೆ ಪುತ್ರ ಮನವಿ | ವೀಡಿಯೋ ನೋಡಿ
ನಾವೇನು ತಪ್ಪು ಮಾಡಿದ್ದೇವೆ? ನಮಗೇಕೆ ಈ ಶಿಕ್ಷೆ? ಈ ಘಟನೆಯಿಂದ ನನ್ನ ಪತ್ನಿ ಬಹಳ ನೊಂದಿದ್ದಾರೆ. ಉದ್ದೇಶಪೂರ್ವಕವಾಗಿ ನಮ್ಮ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರ ಏನು ಸತ್ತು ಹೋಗಿದೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬೀದಿಯ ಕೊನೆಯಲ್ಲಿ ಅವರಿಗೆ ಸೇರಿದ ಕಾರುಗಳು ನಿಂತಿವೆ. ಅವುಗಳಿಗೆ ಕಲ್ಲು ಹೊಡೆಯುವುದಿಲ್ಲ. ಆದರೆ, ನಮ್ಮ ಮನೆಯ ಮುಂದೆ ನಿಂತ ವಾಹನಗಳಿಗೆ ಕಲ್ಲು ಹೊಡೆದು, ದಾಳಿ ಮಾಡುತ್ತಾರೆ ಎಂದರೆ ಅವರ ಉದ್ದೇಶವೇನು ಎಂದು ಪ್ರಶ್ನಿಸಿದರು.
ಎಂದಿಗೂ ಈಶ್ವರಪ್ಪ Eshwarappa ಅವರ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಈಗ ಅವರೇ ಅಧಿಕಾರದಲ್ಲಿ ಇದ್ದಿದ್ದರೆ ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅಳಲು ತೋಡಿಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post