ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕನ್ನಡ ಚಿತ್ರರಂಗಕ್ಕೆ ಹಲವಾರು ಕೊಡುಗೆಗಳನ್ನು ನೀಡಿರುವ ಮಲೆನಾಡು ಈಗ ಇಬ್ಬರು ಬೆಡಗಿಯರನ್ನು ಬಣ್ಣದ ಲೋಕಕ್ಕೆ ನೀಡುತ್ತಿದೆ.

ಹಂಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಹೊಸ ಚಿತ್ರಕ್ಕೆ ಈ ಹಿಂದೆ ಹಲವಾರು ಕಿರುಚಿತ್ರಗಳನ್ನು ಮಾಡಿ ಗಮನ ಸೆಳೆದಿದ್ದ ಯುವ ನಿರ್ದೇಶಕ ಪವನ್ ಕೃಷ್ಣರ ನಿರ್ದೇಶನದಲ್ಲಿ ಹೊಸ ಚಿತ್ರ ಮೂಡಿಬರುತ್ತಿದೆ.
ಈ ಹೊಸ ಚಿತ್ರಕ್ಕೆ ಮಲೆನಾಡಿನ ಇಬ್ಬರು ಬೆಡಗಿಯರು ನಾಯಕಿಯರಾಗಿ ಆಯ್ಕೆಯಾಗಿದ್ದಾರೆ ಹಿಂದೆ. ಸ್ಯಾಂಡಲ್’ವುಡ್’ನಲ್ಲಿ ಸದ್ದು ಮಾಡಿದ ಮೀಟೂ ವಿಥ್ ಫೈಟೂ ಚಿತ್ರದ ನಿರ್ದೇಶಕ ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ ಕ್ರಿಯೇಟಿವ್ ಹೆಡ್ ಆಗಿ ಈ ಚಿತ್ರಕ್ಕೆ ಕೈ ಜೋಡಿಸಿದ್ದಾರೆ.

ಪವನ್ ಕೃಷ್ಣ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ನಟಿ ಸೌಖ್ಯ ಗೌಡ ಮತ್ತು ನಟಿ ಆಕೃತಿ ಜೊತೆಯಾಗಿ ನಟಿಸುತ್ತಿದ್ದಾರೆ.

ಈ ಇಬ್ಬರು ನಟಿಯರು ಆಡಿಷನ್ ಮೂಲಕ ಈ ಚಿತ್ರಕ್ಕೆ ಆಯ್ಕೆಯಾಗಿದ್ದು ಇವರಿಗೆ ಜೋಡಿಯಾಗಿ ಹೊಸ ನಾಯಕ ನಟ ನಟಿಸುತ್ತಿದ್ದಾರೆ. ಅದು ಯಾರೆಂಬುದು ಇದೇ ಡಿ.31 ಕ್ಕೆ ಕನ್ನಡದ ದೊಡ್ಡ ನಟರ ಕೈಯಿಂದ ನಾಯಕನ ಹೆಸರು ಚಿತ್ರದ ಹೆಸರು ಹಾಗೂ ಚಿತ್ರದ ಪೋಸ್ಟರ್ ಬಿಡುಗಡೆಯಾಗಲಿದೆ.
ಇನ್ನು, 2021 ಜ.14 ರಂದು ಮುಹೂರ್ತ ನಡೆಯಲಿದ್ದು, ಅದೇ ದಿನದಿಂದ ಚಿತ್ರ ತಂಡ ಚಿತ್ರೀಕರಣಕ್ಕೆ ಸಜ್ಜಾಗಲಿದೆ.


ಚಿತ್ರಕ್ಕೆ ಸುರೇಂದ್ರ ಪಣಿಯೂರ್ ಛಾಯಾಗ್ರಹಣವಿದ್ದು, ಉತ್ತಮ್ ಸಾರಂಗ್ ಸಂಗೀತವಿದೆ. ಸನತ್ ಉಪ್ಪುಂದ ಸಂಕಲನವಿದ್ದು ಹಾಗೂ ಪವನ್ ಕುಮಾರ್ ರವರ ಸಂಭಾಷಣೆಯಲ್ಲಿ ಈ ಚಿತ್ರ ಮೂಡಿಬರುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post