ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದಲ್ಲಿ ನಿನ್ನೆ ಸಂಭವಿಸಿದ ಅಹಿತಕರ ಘಟನೆಗೆ ಸಂಬಂಧಿಸಿದಂತೆ 62 ಮಂದಿಯನ್ನು ಬಂಧಿಸಲಾಗಿದ್ದು, ಒಟ್ಟು 10 ಎಫ್’ಐಆರ್ ದಾಖಲಿಸಲಾಗಿದೆ ಎಂದು ಐಜಿಪಿ ಎಸ್. ರವಿ ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಲ್ಲಿಂದು ಮಾತನಾಡಿದ ಅವರು, ನಿನ್ನೆ ನಡೆದಿರುವ ಅಹಿತಕರ ಘಟನೆ ಸಂಬಂಧ ಈಗಾಗಲೇ, 62 ಜನರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಸುಮಾರು 19 ಜನರಿಗೆ ಗಾಯಗಳಾಗಿದ್ದು, ಸ್ಥಳಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ, ನಿನ್ನೆ ನಡೆದಿರುವ ಪ್ರಕರಣಗಳ ಸಂಬಂಧ 10 ಎಫ್’ಐಆರ್ ಪ್ರಕರಣಗಳು ದಾಖಲಾಗಿವೆ. ಕೋಟೆ ಮತ್ತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದೆ ಎಂದರು.
ನಿನ್ನೆ ಮಧ್ಯಾಹ್ನದವರೆಗೂ 7-8 ಜಾಗಗಳಲ್ಲಿ, ಪ್ರತಿಕಾರದ ಪ್ರಕರಣಗಳು ಜರುಗಿವೆ. ನಗರದಲ್ಲಿ ಶಾಂತಿ ಸ್ಥಾಪಿಸಲು ಪೊಲೀಸ್ ಇಲಾಖೆ ಶ್ರಮಿಸಿದೆ ಎಂದರು.
ಈಗಾಗಲೇ ಒಂದು ಸಾವಿರ ಪೊಲೀಸ್ ಸಿಬ್ಭಂಧಿಗಳನ್ನು ಹೊರಗಿನಿಂದ ಕರೆಸಲಾಗಿದ್ದು, 148 ಮತ್ತು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಹೊರಗಿನಿಂದ ಯಾವುದೇ ಕಿಡಿಗೇಡಿಗಳು ಒಳಪ್ರವೇಶಿಸದಂತೆ, 9 ಚೆಕ್ ಪೋಸ್ಟ್’ಗಳನ್ನು ತೆರೆಯಲಾಗಿದೆ. 19 ಮೊಬೈಲ್ ಗಸ್ತು ವಾಹನಗಳು, 22 ಚೀತಾ ವಾಹನಗಳು, 13 ಪೆಟ್ರೋಲಿಂಗ್ ಪೊಲೀಸರನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದರು.
ನಾಗರಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಸುಳ್ಳು ಸುದ್ಧಿಗಳಿಗೆ ಮನ್ನಣೆ ನೀಡಬಾರದು ಎಂದವರು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
 
	    	




 Loading ...
 Loading ... 
							



 
                
Discussion about this post