ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕುವೆಂಪು ರಸ್ತೆ ಹಾಗೂ ಸಾಗರ ರಸ್ತೆಯಲ್ಲಿದ್ದ ಬೀದಿಬದಿ ವ್ಯಾಪಾರಿಗಳನ್ನು ಮಹಾನಗರ ಪಾಲಿಕೆ ಇಂದು ತೆರವುಳಿಸಿದ್ದು, ಇವರಿಗೆಲ್ಲಾ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ಈ ಭಾಗದಲ್ಲಿ ಸಂಚಾರದ ಒತ್ತಡ ಹೆಚ್ಚಿರುವ ಕಾರಣ ಟ್ರಾಫಿಕ್ ಜಾಂ ಸಹ ಆಗುತ್ತಿದೆ. ಫುಟ್ ಪಾತ್ ಮೇಲಿನ ಹಣ್ಣು ಹಾಗೂ ತರಕಾರಿ ಅಂಡಿಗಳಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿತ್ತು. ಬೀದಿಬದಿಗಳಲ್ಲಿ ಅಂಗಡಿ ಇಡದಂತೆ ಈ ಕುರಿತಂತೆ ಈ ಹಿಂದೆಯೂ ಸಹ ಎಚ್ಚರಿಕೆ ನೀಡಲಾಗಿತ್ತು. ಆದರೆ, ಇದಕ್ಕೆ ಕ್ಯಾರೇ ಎನ್ನದೇ ವ್ಯಾಪಾರ ನಡೆಯುತ್ತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಅಧಿಕಾರಿಗಳು ಇಂದು ಕಾರ್ಯಾಚರಣೆ ನಡೆಸಿ ಸಾಗರ ರಸ್ತೆಯಲ್ಲಿ 15 ಹಾಗೂ ಕುವೆಂಪು ರಸ್ತೆಯಲ್ಲಿ 20 ಅಂಗಡಿಗಳನ್ನು ತೆರವುಳಿಸಿದ್ದಾರೆ.
ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಏನು?
ಇನ್ನು, ಹೊಸಮನೆಯ ಶಿವಶಂಕರ್ ಗ್ಯಾರೇಜ್ ಬಳಿಯ ಕನ್ಸರ್ವೆನ್ಸಿ ಹಾಗೂ ದೈವಜ್ಞ ಕಲ್ಯಾಣ ಮಂದಿರದ ಬಳಿಯ ಒಂದು ಪ್ರದೇಶವನ್ನು ಅಭಿವೃದ್ಧಿ ಮಾಡಲಾಗಿದೆ. ಬೀದಿ ಬದಿ ವ್ಯಾಪಾರ ಮಾಡುವ ಕಾರ್ಡ್ ಹೊಂದಿರುವವರು ಇಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಕಾರ್ಡ್ ಹೊಂದಿರದೇ ಇರುವವರು ಹೊಸದಾಗಿ ಕಾರ್ಡ್ ಮಾಡಿಸಿದ ನಂತರ ಪಾಲಿಕೆ ನಿಗದಿಪಡಿಸುವ ಸ್ಥಳದಲ್ಲಿ ವ್ಯಾಪಾರ ಮಾಡಿಕೊಳ್ಳಬಹುದಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post