ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ 21414 ರೈತರಿಗೆ ಒಟ್ಟು 28.94 ಕೋಟಿ ವಿಮಾ ಹಣ ಬಿಡುಗಡೆಯಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, 2019-20 ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿಯಲ್ಲಿ ತೋಟಗಾರಿಕೆ ಬೆಳೆಗಳಾದ ಅಡಿಕೆ, ಕಾಳು ಮೆಣಸು, ಮಾವು ಬೆಳೆಗಳಲ್ಲಿ ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿಗೊಳಗಾದ ಕಾರಣದಿಂದಾಗಿ, ಬೆಳೆ ವಿಮೆ ಕಟ್ಟಿದ ಶಿವಮೊಗ್ಗ ಜಿಲ್ಲೆಯ 21414 ರೈತರಿಗೆ ಒಟ್ಟು 28.94 ಕೋಟಿ ವಿಮೆ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತದೆ. ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಕೋರಿದ್ದಾರೆ.
| ಕ್ರ. ಸಂ. | ತಾಲೂಕು | ಫಲಾನುಭವಿಗಳ ಸಂಖ್ಯೆ | ವಿಮಾ ಮೊತ್ತ (ಲಕ್ಷಗಳಲ್ಲಿ) |
| 01 | ಶಿವಮೊಗ್ಗ | 2138 | 225.72 |
| 02 | ಭದ್ರಾವತಿ | 2021 | 120.9 |
| 03 | ಶಿಕಾರಿಪುರ | 4120 | 108.12 |
| 04 | ಸೊರಬ | 7780 | 1853.87 |
| 05 | ಸಾಗರ | 1366 | 108.07 |
| 06 | ತೀರ್ಥಹಳ್ಳಿ | 2041 | 260.9 |
| 07 | ಹೊಸನಗರ | 1948 | 216.87 |










Discussion about this post