ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾತ್ರೋರಾತ್ರಿ ಶಿವಮೊಗ್ಗಕ್ಕೆ ಭೇಟಿ ನೀಡಿದ ಎನ್ಐಎ NIA ತಂಡ ಪ್ರೇಮ್ ಸಿಂಗ್‌ಗೆ ಚೂರಿ ಇರಿದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿದ್ದ ಶಾರೀಕ್ ಮತ್ತು ಮೊಹ್ಮದ್ ಜಬೀಯನ್ನು ಪ್ರತ್ಯೇಕವಾಗಿ ಮಹಜರ್ ಮಾಡಲಾಗಿದೆ.
ಆ.15 ರಂದು ಸಾವರ್ಕರ್ ಫ್ಲೆಕ್ಸ್ ವಿಚಾರದಲ್ಲಿ ನಡೆದ ಗಲಾಟೆ ಸಂದರ್ಭದಲ್ಲಿ ಪ್ರೇಮ್ ಸಿಂಗ್‌ಗೆ ಚಾಕುವಿನಿಂದ ಇರಿದ ಪ್ರಕರಣದಲ್ಲಿ ಮಹ್ಮದ್ ಜಬೀ ಮತ್ತು ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಆರೋಪಿ ಶಾರೀಕ್ ಸಹ ಆರೋಪಿಯಾಗಿದ್ದನು.
ಪ್ರೇಮ್ ಸಿಂಗ್ ಪ್ರಕರಣ ಬೇಧಿಸಿದಾಗಲೇ ಶಂಕಿತ ಉಗ್ರರ ಕಾರ್ಯಾಚರಣೆ ಬೆಳಕಿಗೆ ಬಂದಿದ್ದು, ಈ ಎರಡೂ ಪ್ರಕರಣ ಎನ್ಐಎಗೆ ಹಸ್ತಾಂತರವಾದ ಹಿನ್ನಲೆಯಲ್ಲಿ ಎನ್ ಐ ಎ ಇಂದು ಬೆಳ್ಳಂಬೆಳಿಗ್ಗೆ ಪ್ರತ್ಯೇಕವಾಗಿ ಮೊಹ್ಮದ್ ಜಬೀ ಮತ್ತು ಶಾರೀಕ್ ನನ್ನ ಕರೆದು ತಂದು ಮಹಜರ್ ಮಾಡಲಾಗಿದೆ ಎನ್ನಲಾಗಿದೆ.
Also read: ಶಿವಮೊಗ್ಗದಲ್ಲಿ ಹೋಳಿ ಸಂಭ್ರಮ: ಬಿಗಿ ಭದ್ರತೆ ನಡುವೆ ಬಣ್ಣ ಹಚ್ಚಿ ಸಂಭ್ರಮಿಸಿದ ಯುವಕರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post