ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಎಂಆರ್‍ಎಸ್ ವೃತ್ತದಿಂದ ಊರುಗಡೂರು ವೃತ್ತದವರೆಗೆ ಬೈಪಾಸ್ ರಸ್ತೆಯಲ್ಲಿ ಬೀದಿ ದೀಪ ಅಳವಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೈಪಾಸ್ ರಸ್ತೆಯಲ್ಲಿ ಬೀದಿ ದೀಪಗಳು ಇಲ್ಲದೆ, ಅನೇಕ ಅಪಘಾತಗಳು ಸಂಭವಿಸುತ್ತಿದ್ದು, ಈ ಬಗ್ಗೆ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Also read: 45 ನಿಮಿಷ ಡೆಡ್’ಲೈನ್ ನೀಡಿ ಬಾಂಗ್ಲಾ ಪ್ರಧಾನಿಯನ್ನೇ ದೇಶ ಬಿಟ್ಟು ಓಡಿಸಿದ ಝಮಾನ್ ಯಾರು?
ಈ ರಸ್ತೆಯಲ್ಲಿ ಮೈತ್ರಿ ನರ್ಸಿಂಗ್ ಶಾಲೆ ನಂದನ್ ಶಾಲೆ ಸೇರಿದಂತೆ ನಾಲ್ಕು ಶಾಲಾ ಕಾಲೇಜುಗಳು ಇವೆ. ರಾತ್ರಿಯೊತ್ತು ಬೀದಿ ದೀಪಗಳು ಇಲ್ಲದ ಕಾರಣ ಹಲವಾರು ಅಪಘಾತಗಳು ಸಂಭವಿಸುತ್ತಿದೆ. ಇತ್ತೀಚಿಗಷ್ಟೇ 2 KSRTC ಬಸ್ ಅಪಘಾತವಾಗಿ ಓರ್ವನ ಸಾವಿಗೆ ಕಾರಣವಾಗಿತ್ತು. ಆಟೋ ಮತ್ತು ದ್ವಿಚಕ್ರ ವಾಹನಗಳು ಕೂಡ ಕತ್ತಲೆಯಲ್ಲಿ ಅನೇಕ ಅಪಘಾತಕ್ಕೆ ಕಾರಣವಾಗಿದ್ದು, ಕೂಡಲೇ ಬೀದಿದೀಪದ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅಲ್ಲದೇ ಇಲ್ಲಿ ಇತ್ತೀಚಿಗೆ ಅನಧಿಕೃತ ಡಾಬಾಗಳು ಕೂಡ ಕಾರ್ಯನಿರ್ವಹಿಸುತ್ತಿವೆ. ರಾತ್ರಿಯೊತ್ತು ಪುಂಡರ ಹಾವಳಿ ಹೆಚ್ಚಾಗಿದ್ದು, ಅನೇಕ ಗೂಡಂಗಡಿಗಳ ಬೀಗವನ್ನು ಒಡೆದು ಲೂಟಿ ಮಾಡಿದ ಘಟನೆಗಳು ನಡೆದಿವೆ. ಪೊಲೀಸರು ರಾತ್ರಿ ವೇಳೆ ಈ ಭಾಗದಲ್ಲಿ ಹೆಚ್ಚಿನ ಗಸ್ತು ಏರ್ಪಡಿಸಿ ಪುಂಡು ಪೋಕರಿಗಳ ಹಾವಳಿಯನ್ನು ನಿಯಂತ್ರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post