ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಸ್‌ಆರ್‌ಎಸ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಫ್-೨ ಫೀಡರ್‌ಗೆ ಸಂಬಂಧಿಸಿದಂತೆ ಮಾಡಲ್ ಸಬ್‌ಡಿವಿಷನ್ ಯೋಜನೆಯಡಿ ಸ್ಪನ್ ಪೋಲ್ ಅಳವಡಿಕೆ ಕಾಮಗಾರಿ ಇರುವುದರಿಂದ ನ.೨೫ರಂದು ಬೆಳಿಗ್ಗೆ ೯ರಿಂದ ಸಂಜೆ ೬ರವರೆಗೆ ನಗರ ವ್ಯಾಪ್ತಿಯ ಬಾಲರಾಜ್ ಅರಸ್ ರಸ್ತೆ, ಸಿಟಿ ಕಾರ್ಪೋರೇಷನ್ ರಸ್ತೆ, ಪ್ಲವರ್ ಮಾರ್ಕೆಟ್ ರಸ್ತೆ, ಅಂಬೇಡ್ಕರ್ ಭವನ, ಕಸ್ತೂರಿಬಾ ಕಾಲೇಜು, ಬಿ.ಎಸ್.ಎನ್.ಎಲ್.ಕಚೇರಿ, ನೆಹರು ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ನ.25 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಜಯನಗರ, ಬಸವನಗುಡಿ, ಸವಳಂಗ ಮುಖ್ಯ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೆಸ್ಕಾಂ ವತಿಯಿಂದ ಮಾಡೆಲ್ ಸಬ್ ಡಿವಿಷನ್ ಯೋಜನೆಯಡಿ ವಿದ್ಯುತ್ ಕೇಬಲ್‍ಗಳ ಅಳವಡಿಕೆ ಕಾರ್ಯ ಇರುವುದರಿಂದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post