ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪನಿಯು ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಒದಗಿಸುವ ಹಿನ್ನೆಲೆಯಲ್ಲಿ ಪ್ರಸ್ತುತ ಅಳವಡಿಸಿರುವ ಭೂಗತ ಕೇಬಲ್ ಅಳವಡಿಕೆ ಚೇತನಗೊಳ್ಳಲಿರುವುದರಿಂದ ಈ ಪ್ರದೇಶದ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಎಚ್ಚರಿಕೆಯಿಂದಿರುವಂತೆ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ಶಿವಮೊಗ್ಗದಿಂದ ಸಾಗರ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬಲಭಾಗದಿಂದ ಭೂಗತ ಕೇಬಲ್ ಅಳವಡಿಸಲಾಗಿದೆ. ಈ ಮಾರ್ಗವು ಚೇತನ ಹೇರ್ ಕಟಿಂಗ್ ಸೆಲೂನ್‌ನವರೆಗೆ ಬಲಭಾಗದವರೆಗೆ ಇದ್ದು, ಅಲ್ಲಿಂದ ಎಡಭಾಗಕ್ಕೆ ರಾಷ್ಟ್ರೀಯ ಹೆದ್ದಾರಿಯನ್ನು ಹಾದು, ಕಾಸ್ಮೋ ಕ್ಲಬ್ ಮುಂಭಾಗದಿಂದ ಎಡದಿಂದ ಪೆಸಿಟ್ ಕಾಲೇಜಿನವರೆಗೂ ಎಡಭಾಗದಲ್ಲಿಯೇ ಅಳವಡಿಸಿ ಮುದ್ದಿನಕೊಪ್ಪ ಕ್ರಾಸ್‌ವರೆಗೂ ಬಲಭಾಗದಲ್ಲಿಯೇ ಮುಂದುವರೆದು ಮುದ್ದಿನಕೊಪ್ಪ ಕ್ರಾಸ್‌ನಿಂದ ಮುದ್ದಿನಕೊಪ್ಪ ಕೆರೆಯವರೆಗೂ ಓವರ್‌ಹೆಡ್ ಮಾರ್ಗ ರಚಿಸಿದ್ದು, ಮುದ್ದಿನಕೊಪ್ಪ ಗ್ರಾಮದ ಕೆರೆಯಿಂದ ಸಿದ್ಲೀಪುರ ಕ್ರಾಸ್‌ವರೆಗೂ ರಸ್ತೆಯ ಬಲಭಾಗದಲ್ಲೇ ಭೂಗತ ಕೇಬಲ್‌ನ್ನು ಅಳವಡಿಸಲಾಗಿದೆ.
ಈ ಪ್ರದೇಶದಲ್ಲಿ ಸಾರ್ವಜನಿಕರು ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸದೆ ಗುಂಡಿ ಅಗೆಯುವುದನ್ನು ಮಾಡಬಾರದು. ಸಿದ್ಲೀಪುರ ಕ್ರಾಸ್‌ನಿಂದ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದ ಹತ್ತಿರವಿರುವ ರೈಲ್ವೇ ಕ್ರಾಸ್‌ವರೆಗೆ ಓವರ್‌ಹೆಡ್ ಮಾರ್ಗ ರಚಿಸಿದ್ದು, ರೈಲ್ವೇ ಕ್ರಾಸ್‌ನ ಇನ್ನೊಂದು ಬದಿಯಲ್ಲಿರುವ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ಅಳವಡಿಸಿರುವ ಸುಮಾರು 30 ಪರಿವರ್ತಕಗಳನ್ನು ಚಾಲನೆಗೊಳಿಸಲಾಗಿದ್ದು, ಈ ಭಾಗದಲ್ಲಿ ಸಾರ್ವಜನಿಕರು ಜಾನುವಾರುಗಳನ್ನು ಕಂಬಗಳಿಗೆ ಕಟ್ಟದಂತೆ ಹಾಗೂ ಸಾರ್ವಜನಿಕರು ಕಂಬಗಳನ್ನು ಹತ್ತದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post