ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
2022 ರ ಜನವರಿ 2 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ರವರೆಗೆ ಎಂ.ಆರ್.ಎಸ್ ವಿದ್ಯುತ್ ಕೇಂದ್ರದಿಂದ ಸರಬರಾಜಾಗುವ ಎಫ್-೨ ಫೀಡರ್ ಗೆ ಸಂಬಂಧಿಸಿದಂತೆ ಮಾಡಲ್ ಸಬ್ ಡಿವಿಷನ್ ಯೋಜನೆಯಡಿ ಸ್ಪನ್ ಪೋಲ್ ಅಳವಡಿಕೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕೆಳಕಂಡ ಪ್ರದೇಶದಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ನಗರ ವ್ಯಾಪ್ತಿಯ ಸವಳಂಗ ರಸ್ತೆ, ಲೂರ್ದು ನಗರ, ಸಿಟಿ ಕಾರ್ಪೊರೇಷನ್, ಕುವೆಂಪು ರಂಗಮಂದಿರ, ಡಿ.ಸಿ.ಕಚೇರಿ, ಶಿವಮೂರ್ತಿ ಸರ್ಕಲ್, ಮಹಾವೀರ ಸರ್ಕಲ್, ಬಾಲರಾಜ್ ಅರಸ್ ರಸ್ತೆ, ಫ್ಲವರ್ ಮಾರ್ಕೆಟ್ ರಸ್ತೆ, ಅಂಬೇಡ್ಕರ್ ಭವನ, ಕಸ್ತೂರಬಾ ಕಾಲೇಜು, ಬಿಎಸ್ಎನ್ಎಲ ಕಚೇರಿ, ನೆಹರು ರಸ್ತೆ, ತಿಲಕ್ ನಗರ, ದುರ್ಗಿಗುಡಿ, ಪಾರ್ಕ್ ಬಡಾವಣೆ, ಡಿವಿಎಸ್ ಕಾಲೇಜು, ಗೋಪಿ ಸರ್ಕಲ್, ನೆಹರೂ ಕ್ರೀಡಾಂಗಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post