ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು #PM Narendra Modi UPI ಮೂಲಕ (Cash less) ಹಣರಹಿತ ವ್ಯವಹಾರಕ್ಕೆ ಅನುವು ಮಾಡಿದರ ಪರಿಣಾಮ, ಪ್ರತಿಯೊಬ್ಬ ಸಣ್ಣ ಸಣ್ಣ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು ದಿನನಿತ್ಯ ಬ್ಯಾಂಕ್ ವ್ಯವಹಾರಗಳಲ್ಲಿ ತೊಡಗಿದ್ದಾರೆ. ಆದರೆ ಈಗ ಸಣ್ಣ ಸಣ್ಣ ವ್ಯಾಪಾರಿಗಳಿಗೆ ಬ್ಯಾಂಕ್ ವ್ಯವಹಾರ ಆದರ ಮೇಲೆ ನೋಟಿಸ್ ನೀಡಿ, ನೀವು GST Register ಮಾಡಿಸಬೇಕು ಮತ್ತು ಟ್ಯಾಕ್ಸ್ ಕಟ್ಟಬೇಕೆಂದು ಸಣ್ಣ ಸಣ್ಣ ವ್ಯಾಪಾರಿಗಳಿಗೆ ಕಿರುಕುಳ ನೀಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಸ್. ದತ್ತಾತ್ರಿ ಖಂಡಿಸಿದ್ದಾರೆ.

ಒಂದು ಕಡೆ ಸರ್ಕಾರಕ್ಕೆ ಬೇಕಾದ ಹಣವನ್ನು ಜನರಿಂದ ಪಡೆದುಕೊಳ್ಳುವುದು, ಮತ್ತೊಂದು ಕಡೆ ಕೇಂದ್ರ ಸರ್ಕಾರಕ್ಕೆ UPI ಮೂಲಕ ಸಿಕ್ಕಿರುವ ಪ್ರಶಂಸೆಯನ್ನು ತಗ್ಗಿಸುವ ಕ್ರಮಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರದ ಬೀದಿ ಬದಿ ವ್ಯಾಪಾರಿಗಳಿಗೆ, ಸಣ್ಣ ಸಣ್ಣ ವ್ಯಾಪಾರಿಗಳಿಗೆ ನೀಡುತ್ತಿರುವ ಈ ಕಿರುಕುಳವನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post