ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಫೆ. 22ರಂದು ನಮ್ಮನ್ನಗಲಿದ ಪುರೋಹಿತರು, ಮಾರ್ಗದರ್ಶಕರೂ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪ್ರವರ್ತಕರೂ ಆಗಿದ್ದ ಅ. ಪ. ರಾಮಭಟ್ಟರ ನೆನೆಪಿನಲ್ಲಿ ಭಕ್ತಿನಮನ ಮತ್ತು ನುಡಿನಮನ ಕಾರ್ಯಕ್ರಮವನ್ನು ಮಾ. 7ರಂದು ಗಾಯತ್ರಿ ಕಲ್ಯಾಣ ಮಂದಿರದ್ಲಲಿ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಹೌಸಿಂಗ್ ಸೊಸೈಟಿಯ ಅಧ್ಯಕ್ಷ ಎಸ್. ಕೆ. ಮರಿಯಪ್ಪ ಮತ್ತು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ ಭಾಗವತ್, ರವೀಂದ್ರನಗರ ಪ್ರಸನ್ನ ಗಣಪತಿ ದೇವಸ್ಥಾನದ ಮುಖ್ಯ ಅರ್ಚಕರಾಗಿ, ಅವರ ಕೆಲಸ ಅನನ್ಯ. ಜಿಲೆಯಲ್ಲಿ ದೇವಸ್ಥಾನವನ್ನು ವಿವಿಧ ಕಾರ‍್ಯಕ್ರಮಗಳ ಮೂಲಕ ಜನಪ್ರಿಯಗೊಳಿಸಿದರು. ದೇವಸ್ಥಾನ ಕೇವಲ ದೇವಸ್ಥಾನವಾಗಿರದೆ ಕಲೆ, ಸಂಸ್ಕೃತಿ ಮತ್ತು ಧಾರ್ಮಿಕ ಕ್ಷೇತ್ರದ ನೆಲೆಯೂ ಆಗುವಂತೆ ಮಾಡಿದ್ದರು. ಈ ಮೂಲಕ ನಗರದ ಮತ್ತು ಜಿಲ್ಲೆಯ ಜನರ ಅಪಾರ ವಿಶ್ವಾಸ ಗಲಿಸಿದ್ದರು ಎಂದರು.
ಅವರ ನಿಧನದ ಹಿನ್ನೆಲೆಯಲ್ಲಿ ಮಾ. 7ರಂದು ಗಾಯತ್ರಿ ಕಲ್ಯಾಣಮಂದಿರದಲ್ಲಿ ಬೆಳಗ್ಗೆ 8:30ರಿಂದ 11ರವರೆಗೆ ಭಕ್ತಿನಮನ ನಡೆಯಲಿದೆ. ರುದ್ರ ಪಠಣ, ವಿಷ್ಣು ಸಹಸ್ರನಾಮ, ಭಜನೆ, ದೇವರನಾಮ ಮತ್ತು ಗಾಯನ ನಡೆಯಲಿದೆ. 11ರಿಂದ ನುಡಿನಮನ ನಡೆಯಲಿದೆ. ಸಮಾಜದ ವಿವಿಧ ಕ್ಷೇತ್ರದ ಮುಖಂಡರು ಭಟ್ಟರ ಕುರಿತು ಮಾತನಾಡುವರು ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭಾಸ್ಕರ್ ಕಾಮತ್, ವಿ. ರಾಜು, ಎಂ. ಶಂಕರ್ ಮೊದಲಾದವರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post