ಬಿಜೆಪಿಗೆ ಕಾರ್ಯಕರ್ತರ ಪಡೆಯೇ ಇದ್ದು, ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯನ್ನು ಯಶಸ್ವಿಯಾಗಿ ಭಾಗಿಯಾಗಿ ಬಿಜೆಪಿಯನ್ನು ಗೆಲ್ಲಿಸುತ್ತಾರೆ. ಮೋದಿಯವರನ್ನು 3ನೇ ಬಾರಿಗೆ ಪ್ರಧಾನಿ ಮಾಡುತ್ತಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಹೇಳಿದ್ದಾರೆ.
ಅವರು ಇಂದು ದುರ್ಗಿಗುಡಿ ಮೊದಲನೇ ಅಡ್ಡರಸ್ತೆಯಲ್ಲಿ (ಬಿಜೆಪಿ ಕಚೇರಿ ಮುಂಭಾಗ)ಲೋಕಸಭಾ ಗ್ರಾಮಾಂತರ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು. ನೆನ್ನೆ ತಾನೇ ಪಕ್ಷದ ಹಿರಿಯರು ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಇಂದು ಬೆಳಿಗ್ಗೆ ರಾಯರ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿ ವಿಶ್ವನಾಯಕ ಮೋದಿಯವರು Narendra Modi ಮತ್ತೊಮ್ಮೆ ಪ್ರಧಾನಿಯಾಗಲು ಪ್ರಾರ್ಥಿಸಿದ್ದೇನೆ. ಯುದ್ಧ ಕಾಲೇ ಶಸ್ತ್ರಭ್ಯಾಸ ಮಾಡದೇ ಲೋಕಸಭಾ ಚುನಾವಣೆಗೆ 2 ತಿಂಗಳ ಹಿಂದಿನಿಂದಲೇ ನಮ್ಮ ಕಾರ್ಯಕರ್ತರ ಪಡೆ ಸನ್ನದ್ಧವಾಗಿದೆ. ಹಿಂದಿನ ಯುಪಿಎ ಮಾಡಿದ ತಪ್ಪುಗಳನ್ನು ಸರಿಪಡಿಸಲು ಮೋದಿಗೆ ಮೊದಲ ಅವಧಿಯಲ್ಲಿ ಸಮಯ ಹಿಡಿಯಿತು. ವಿಶ್ವವೇ ಬೆರಗಾಗುವಂತೆ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದರು.
ಮೋದಿಯವರು ವಿಶ್ವಗುರು ಎನ್ನಿಸಿಕೊಂಡಿದ್ದಾರೆ, ನುಡಿದಂತೆ ನಡೆದಿದ್ದಾರೆ, ಆರ್ಟಿಕಲ್ 370 ರದ್ದು, ರಾಮಮಂದಿರ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಕರ್ನಾಟಕದ ಜನ ಬುದ್ದಿವಂತರಿದ್ದಾರೆ. ಗ್ರಾ.ಪಂ., ರಾಜ್ಯ ಮತ್ತು ರಾಷ್ಟ್ರೀಯ ವಿಚಾರಗಳಿಗೆ ಮತದಾನ ಮಾಡುವಾಗ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಜಿಲ್ಲೆಯ ಯುವಕರಿಗೆ ಸ್ವಾಭಿಮಾನದ ಬದುಕಿಗೆ ಆದ್ಯತೆ ನೀಡಬೇಕಾಗಿದೆ. ಮಲೆನಾಡಿನ ಯುವಶಕ್ತಿ ಜಿಲ್ಲೆಯಲ್ಲೇ ಕರ್ತವ್ಯ ಮಾಡಲು ಕೈಗಾರಿಕೆಗಳು ಮತ್ತು ಬಂಡವಾಳ ಶಾಹಿಗಳು ಬರಬೇಕಾಗಿದೆ. ಸಾಪ್ಟ್‍ವೇರ್ ಪಾರ್ಕ್ ಅಭಿವೃದ್ಧಿ ಮಾಡಬೇಕಾಗಿದೆ ಅದಕ್ಕಾಗಿ ಮೋದಿ ಸರ್ಕಾರ ಬರಬೇಕಾಗಿದೆ ಎಂದರು.
ಬಹು ನಿರೀಕ್ಷಿತ ಕರಾವಳಿ ಮತ್ತು ಮಲೆನಾಡನ್ನು ಸಂಪರ್ಕ ಮಾಡುವ 12 ಕಿ.ಮೀ. ಉದ್ದದ ಆಗುಂಬೆ ಟೆನಲ್ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ದೊರೆತಿದ್ದು, 24-25ರ ಬಜೆಟ್‍ನಲ್ಲಿ ಹಣ ಕಾಯ್ದಿರಿಸುವುದಾಗಿ ನಿತಿನ್ ಗಡ್ಕರಿಯವರು ಈಗಾಗಲೇ ತಿಳಿಸಿದ್ದು, ಡಿಪಿಆರ್ ಸಿದ್ದಪಡಿಸಲು 2 ಕೋಟಿ ಇಂದು ನೀಡಲಿದ್ದಾರೆ. ಹಿಂದಿನ ಸರ್ಕಾರದಲ್ಲೂ ತೆರಿಗೆ ಸಂಗ್ರಹ ಮಾಡುತ್ತಿದ್ದರು. ಆದರೆ, ಎಷ್ಟು ಅಭಿವೃದ್ಧಿಯಾಗಿತ್ತು. ಈಗ ದೇಶದಲ್ಲಿ ಕಳೆದ 10 ವರ್ಷದಲ್ಲಿ ಏನೆಲ್ಲಾ ಅಭಿವೃದ್ಧಿಯಾಗಿದೆ ಎಂಬುವುದನ್ನು ದೇಶದ ಜನರು ನೋಡಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ದೇಶದಲ್ಲಿ ಬಿಜೆಪಿ 370ಕ್ಕೂ ಹೆಚ್ಚು, ಎನ್‍ಡಿಎ 400 ಕ್ಕೂ ಹೆಚ್ಚು ಸ್ಥಾನ ಗಳಿಸಲಿದ್ದು, ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದರು.
Discussion about this post