ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೊರವಲಯದ ಗೋಪಶೆಟ್ಟಿಕೊಪ್ಪದ ಶ್ರೀ ಬಸವೇಶ್ವರ ಸ್ವಾಮಿ, ಸಿದ್ದೇಶ್ವರ ಸ್ವಾಮಿ ಸೇವಾ ಸಮಿತಿ ಹಾಗೂ ಸರ್ಜಿ ಫೌಂಡಶನ್ ಶಿವಮೊಗ್ಗ ಇವರ ಸಂಯುಕ್ತಾಶ್ರಯದೊಂದಿಗೆ ಸರ್ಜಿ ಫೌಂಡೇಶನ್‌ನ Sarji Foundtion ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ನೇತೃತ್ವದಲ್ಲಿ ಬುಧವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶಿಬಿರದಲ್ಲಿ ಜನರಲ್ ಪಿಜಿಷಿಯನ್, ಸ್ತ್ರೀ ರೋಗ ತಜ್ಞರು, ಮೂಳೆ ರೋಗ ತಜ್ಞರು ಹಾಗೂ ಮಕ್ಕಳ ತಜ್ಞ ವ್ಯದ್ಯರು ಭಾಗವಹಿಸಿ ಮಕ್ಕಳು, ಪುರುಷರು, ಹೆಣ್ಣು ಮಕ್ಕಳು ಹಾಗೂ ವೃದ್ಧರ ಆರೋಗ್ಯ ತಪಾಸಣೆ ನಡೆಸಿ ಒಟ್ಟು 200 ಕ್ಕೂ ಹೆಚ್ಚು ಮಂದಿಗೆ ತಪಾಸಣೆ ನಡೆಸಿ ಔಷಧಿ ವಿತರಿಸಲಾಯಿತು. ಶಿಬಿರದಲ್ಲಿ ಸರ್ಜಿ ಆಸ್ಪತ್ರೆಯ ಡಾ.ಶೂನ್ಯ ಸಂಪದ್, ಡಾ.ನಿಖಿಲ್, ಡಾ.ಚಂದೂ ಶ್ರೀ, ಡಾ.ರಶ್ಮಿ, ಡಾ.ಸಿದ್ಧರಾಮ್ ತಪಾಸಣೆ ನಡೆಸಿದರು.
Also read: ಮೇಕಪ್ ತರಬೇತಿ ಪಡೆದು ಸ್ವಉದ್ಯೋಗ ರೂಢಿಸಿಕೊಳ್ಳಿ: ನಟ ಧನಂಜಯ ಕರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post