ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇನ್ನರ್ ವ್ಹೀಲ್ ಕ್ಲಬ್ ಶಿವಮೊಗ್ಗ ಸೆಂಚುರಿ ವತಿಯಿಂದ ಇಂದು ವೈದ್ಯರ ದಿನಾಚರಣೆಯ ಅಂಗವಾಗಿ ವೆಂಕಟೇಶ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಉಚಿತ ದಂತ ತಪಾಸಣಾ ಶಿಬಿರ ಹಾಗೂ ಐವರು ವೈದ್ಯರಿಗೆ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಸೌಮ್ಯ ಮಾತನಾಡಿ, ನಮ್ಮ ದೇಶದಲ್ಲಿ ಶೇ.40ಕ್ಕಿಂತ ಹೆಚ್ಚಿನ ಮಕ್ಕಳಿಗೆ ಹಲ್ಲಿನ ಆರೋಗ್ಯದ ಬಗ್ಗೆ ಗಮನವಿಲ್ಲ. 32 ಹಲ್ಲುಗಳಿರುತ್ತವೆ. ಒಂದು ಹೋದರೆ ಹೋಗಲಿ ಎಂಬ ನಿರ್ಲಕ್ಷ್ಯ. ಹಲ್ಲು ನೋವು ಬಂದಾಗ ಮಾತ್ರ ವೈದ್ಯರ ನೆನಪಾಗುತ್ತದೆ. ಪೋಷಕರು ಕೂಡ ತಮ್ಮ ಮಕ್ಕಳಿಗೆ ಹಲ್ಲಿನ ಆರೋಗ್ಯದ ಬಗ್ಗೆ ಜಾಗೃತಿ ನೀಡುವಲ್ಲಿ ನಿರ್ಲಕ್ಷ್ಯ ತಳೆದಿದ್ದಾರೆ. ಪ್ರತಿಯೊಬ್ಬರೂ ದಿನನಿತ್ಯ ಎರಡು ಬಾರಿ ಹಲ್ಲನ್ನು ಬ್ರೆಶ್‍ಮಾಡಿ ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದರು.
ಮಕ್ಕಳಲ್ಲಿ ಮೊದಲು ಹಾಲುಹಲ್ಲು 20 ಇರುತ್ತವೆ. ನಂತರ 18 ವರ್ಷದೊಳಗೆ 32 ಹಲ್ಲುಗಳು ಬರುತ್ತವೆ. ಆದರೆ ಹಾಲುಹಲ್ಲು ಬಿದ್ದುಹೋಗುತ್ತದೆ ಎಂದು ನಿರ್ಲಕ್ಷ್ಯಮಾಡದೆ ಪ್ರತಿನಿತ್ಯ ಎರಡು ಬಾರಿ ಬ್ರೆಶ್‍ಮಾಡಿ, ಸ್ವಚ್ಚವಾಗಿರಿಸಬೇಕು. ತರಕಾರಿ, ಹಾಲು, ಹಣ್ಣು ಹೆಚ್ಚಾಗಿ ಸೇವಿಸಬೇಕು. ಬ್ರೆಡ್, ಬಿಸ್ಕೇಟ್ ಮೊದಲಾದ ಮೈದಾ ಪದಾರ್ಥಗಳು ಹಲ್ಲಿಗೆ ಒಳ್ಳೆಯದಲ್ಲ. ಹಲ್ಲಿನ ಮಧ್ಯದಲ್ಲಿ ಸಿಕ್ಕಿಕೊಳ್ಳುವ ಅಂಟಿನ ಪದಾರ್ಥಗಳು ಹಲ್ಲಿನ ಆರೋಗ್ಯವನ್ನು ಕೆಡಿಸುತ್ತದೆ. ಜೊತೆಗೆ ಮನುಷ್ಯನ ದೇಹಕ್ಕೂ ತೊಂದರೆಯಿದೆ. ಚಾಕ್‍ಲೇಟ್‍ನ್ನು ಕೂಡ ಮಧ್ಯ ತಿನ್ನಬೇಡಿ. ಊಟದ ಮೊದಲು ಅಥವಾ ಹಲ್ಲು ಬ್ರೆಶ್‍ಮಾಡುವ ಮೊದಲು ಚಾಕಲೇಟ್ ತಿನ್ನಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಇನ್ನರ್‍ವ್ಹೀಲ್ ಕ್ಲಬ್‍ನ ಅಧ್ಯಕ್ಷೆ ಅನ್ನಪೂರ್ಣ ರಂಗರಾಜು ಮಾತನಾಡಿ, ಜುಲೈ 1 ವೈದ್ಯರ ದಿನವಾಗಿದ್ದು, ನಿಸ್ವಾರ್ಥ ಸೇವೆ ಮತ್ತು ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದ ವೈದ್ಯರನ್ನು ಗುರುತಿಸಿ, ನಾವು ಇಂದು ಸನ್ಮಾನಿಸುತ್ತಿದ್ದೇವೆ. ಜೊತೆಗೆ ಮಕ್ಕಳಲ್ಲಿ ಹಲ್ಲಿನ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಪಶ್ಚಿಮ ಬಂಗಾಳದ ಖ್ಯಾತವೈದ್ಯರಾದ 2ನೇ ಮುಖ್ಯಮಂತ್ರಿಯೂ ಆದ ಬಿ.ಸಿ. ರಾಯ್ (ಬಿಥನ್‍ಚಂದ್ರ ರಾಯ್) ಅವರಿಗೆ ವೈದ್ಯಕೀಯ ಸೇವೆಗಾಗಿ `ಭಾರತ ರತ್ನ’ ಲಭಿಸಿದ್ದು, ಅದರ ಸವಿನೆನಪಿಗಾಗಿ ಅವರ ಜನ್ಮದಿನವನ್ನು `ವೈದ್ಯರ ದಿನ’ವನ್ನಾಗಿ ಆಚರಿಸುತ್ತಿದ್ದೇವೆ.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸುಮಾಸತೀಶ್, ವೈದ್ಯರಾದ ಸೌಮ್ಯ, ಭಾಗ್ಯಲಕ್ಷ್ಮೀ, ಸುನೀತಾ, ಧರಣಿ, ಮೇಘನಾ, ಚಾರ್ಟರ್ ಪ್ರೆಸಿಡೆಂಟ್ ವಿದ್ಯಾಮಂಜುನಾಥ್, ಖಜಾಂಚಿ ಶೋಭಾರಾಣಿ, ಕಾರ್ಯಕಾರಿ ಮಂಡಳಿಯ ಉಮಾ ಅಮರ್, ಜಯಶಿವಕುಮಾರ್, ವರಲಕ್ಷ್ಮೀ ಪ್ರಭು, ರೂಪಾ ರಾಘವೇಂದ್ರ, ದಿವ್ಯಾಕೊಠಾರಿ, ಮೇಘಾ ಜೋಷಿ, ಸುಮಾ ಹರಿಪ್ರಸಾದ್, ಪುಷ್ಪಲತಾ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















