ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಯಾವುದೇ ಆದೇಶ ಹಾಗೂ ಸೂಚನೆಗಳನ್ನು ನೀಡದೆ ಏಕಾಏಕಿ ಮಾಸ್ಕ್ ಧರಿಸದವರಿಗೆ ದಂಡ ವಸೂಲಿ ಮಾಡುತ್ತಿರುವ ಕ್ರಮವನ್ನು ವಿರೋಧಿಸಿ ಗಾಂಧಿಬಜಾರ್ ವರ್ತಕರ ಸಂಘದ ವತಿಯಿಂದ ಇಂದು ಪಾಲಿಕೆ ಮೇಯರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ನಗರದಲ್ಲಿ ಜಾರಿ ಮಾಡಲಾಗುವ ಕ್ರಮಗಳ ಕುರಿತಾಗಿ ಪ್ರತಿಬಾರಿಯೂ ಜಿಲ್ಲಾಧಿಕಾರಿ ವರ್ತಕರ ಸಂಘದ ಜೊತೆ ಚರ್ಚಿಸಿ ಸಲಹೆ ಪಡೆಯುತ್ತಿದ್ದರು. ಆದರೆ ದಂಡ ವಸೂಲಿ ವಿಚಾರದಲ್ಲಿ ಯಾವುದೇ ಆದೇಶವಿಲ್ಲದೆ ಸಾರ್ವಜನಿಕರಿಂದ ದಂಡ ವಸೂಲಿ ಮಾಡಲಾಗುತ್ತಿದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಜಾತ್ರೆಗಳು, ಸಮಾರಂಭಗಳು ಎಂದಿನಂತೆ ನಡೆಯುತ್ತಿವೆ. ಸಿನಿಮಾ ಮಂದಿರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಇವುಗಳ ಬಗ್ಗೆಯೂ ಗಮನ ಹರಿಸಬೇಕು ಹಾಗೂ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುತ್ತಿರುವ ಕುರಿತು ವರ್ತಕರ ಸಂಘವನ್ನು ಚರ್ಚೆಗೆ ಆಹ್ವಾನಿಸಬೇಕು, ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಗಾಂಧಿಬಜಾರ್‌ನ ಎರಡೂ ಬದಿಯಲ್ಲಿ ಗುಂಡಿ ತೆಗೆಯಲಾಗಿದ್ದು, ಯಾವುದೇ ಪ್ರಾಥಮಿಕ ಕ್ರಮಗಳನ್ನು ತೆಗೆದುಕೊಂಡಿಲ್ಲ. ಅಂಗಡಿಗಳಲ್ಲಿ ಧೂಳು ತುಂಬಿಕೊಂಡಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಬಜಾರ್‌ನ ಎರಡೂ ಬದಿಗಳಿಗೆ ನೀರು ಹಾಕಬೇಕು. ಗುಂಡಿ ತೆಗೆದ ಜಾಗದಲ್ಲಿ ತಕ್ಷಣ ಟಾರ್ ಹಾಕಬೇಕು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post