ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರು ಕೋದಂಡರಾಮ ದೇವಸ್ಥಾನದ ಪ್ರಧಾನ ಅರ್ಚಕರಾದ ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಅವರ ವೇತನಕ್ಕೆ ಕತ್ತರಿ ಹಾಕುವ ನೋಟಿಸ್ ನೀಡುವುದರ ಮೂಲಕ ರಾಜ್ಯ ಸರ್ಕಾರ ಹುಚ್ಚು ಸರ್ಕಾರ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ KS Eshwarappa ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಕನ್ನಡದಲ್ಲಿ ಪೂಜೆ ಮಾಡುವುದರ ಮೂಲಕ ಕಳೆದ 44 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಸುಸಂಸ್ಕøತ ಅರ್ಚಕರಾದ ಕಣ್ಣನ್ ಮಾಮಾ ಎಂದೇ ಖ್ಯಾತರಾದ ಕನ್ನಡಿಗದ ಜನಪ್ರಿಯ ವಿದ್ವಾಂಸರಾದ ಹಿರೇಮಗಳೂರು ಕಣ್ಣನ್ ಅವರಿಗೆ ದೇವಾಲಯದ ಆದಾಯದಲ್ಲಿ ಕೊರತೆ ಇರುವುದರಿಂದ ನಿಮಗೆ ನೀಡುತ್ತಿದ್ದ ವೇತನ 7500 ರೂ.ಗಳನ್ನು 4500 ರೂ.ಗೆ ಇಳಿಸಿದ್ದು, 10 ವರ್ಷದ ಅವಧಿಯ ನೀವು ಪಡೆದ ಸಂಬಳದಲ್ಲಿ 4.74 ಲಕ್ಷ ರೂ.ಗಳನ್ನು ಸರ್ಕಾರಕ್ಕೆ ಮರು ಪಾವತಿಸುವಂತೆ ತಹಶೀಲ್ದಾರ್ ನೋಟಿಸ್ ನೀಡಿದ್ದು ಇದು ಅತ್ಯಂತ ದುರಂತದ ಸಂಗತಿಯಾಗಿದೆ. ಒಂದೆಡೆ ಕನ್ನಡದ ಪೂಜಾರಿಗೆ ಅವಮಾನ, ಇನ್ನೊಂದೆಡೆ ಅವರ ಆತ್ಮಗೌರವದ ಪ್ರಶ್ನೆ, ಇದನ್ನು ಮಾಧ್ಯಮದವರು ಗಮನಕ್ಕೆ ತಂದ ಮೇಲೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅದು ಸಣ್ಣ ವಿಷಯ ನಾನು ಬಗೆಹರಿಸುತ್ತೇನೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.

ರಾಜ್ಯದ 50 ಸಾವಿರ ಅರ್ಚಕರಿಗೆ ಆದಾಯ ಕಡಿಮೆ ಎಂಬ ನೆಪವೊಡ್ಡಿ ಆದಾಯಕ್ಕೆ ಖೋತಾ ಮಾಡಿದರೆ ಅವರ ಪಾಡೇನು ಎಂದು ಪ್ರಶ್ನಿಸಿದ ಅವರು, ಆದಾಯ ಹೆಚ್ಚಿರುವ ದೇವಾಲಯಗಳಲ್ಲಿ ನೀವು ವೇತನ ಹೆಚ್ಚಳ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದರು.

Also read: ಬಾಲರಾಮನಿಗೆ ಚಿನ್ನದ ಕಿರೀಟ ಕಾಣಿಕೆ ಕೊಟ್ಟ ವಜ್ರದ ವ್ಯಾಪಾರಿ | ಬೆಲೆ ತಿಳಿದರೆ ಬೆಚ್ಚಿ ಬೀಳುತ್ತೀರಿ!
ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷದ ಸ್ಥಾನವೂ ಸಿಕ್ಕಿರಲಿಲ್ಲ. ಈ ಬಾರಿ ಕಾಂಗ್ರೆಸ್ ಸಂಪೂರ್ಣ ನಿರ್ನಾಮವಾಗುತ್ತದೆ. ಅಯೋಧ್ಯೆ ರಾಮನ ಬಗ್ಗೆ ಟೀಕೆ ಮಾಡಿದ ಸಿದ್ಧರಾಮಯ್ಯ ನಿನ್ನೆ ನಾನು ಕೂಡ ರಾಮ ಭಕ್ತ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಅದನ್ನು ನೋಡಿ ನನಗೆ ಸಂತೋಷವಾಗಿದೆ. ನಾನು ಇದರಲ್ಲಿ ರಾಜಕೀಯ ಬೆರೆಸಲು ಹೋಗುವುದಿಲ್ಲ. ದೇವರು ಅವರಿಗೆ ಇದೇ ರೀತಿಯಲ್ಲಿ ಮುಂದುವರೆಯುವ ಸದ್ಬುದ್ದಿ ನೀಡಲಿ. ರಾಮ ಇಡೀ ಪ್ರಪಂಚಕ್ಕೆ ಸೇರಿದವನು. ಬಿಜೆಪಿ ರಾಮ ಕಾಂಗ್ರೆಸ್ ರಾಮ ಎಂದು ಬೇರೆ ಬೇರೆ ಇಲ್ಲ. ರಾಮನ ಹೆಸರಲ್ಲಿ ಕೆಟ್ಟ ರಾಜಕಾರಣ ಮಾಡಬೇಡಿ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post