ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಮಾಜಿಕ ಜಾಲತಾಣಗಳಿಂದ ಮುದ್ರಣ ಮಾದ್ಯಮ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇದರ ಜೊತೆಗೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಡಿವೈಎಸ್‌ಪಿ ಬಾಲರಾಜ್ ಆತಂಕ ವ್ಯಕ್ತಪಡಿಸಿದರು.
ಅವರು ಇಂದು ’ತುಂಗಾ ತರಂಗ’ ದಿನಪತ್ರಿಕೆಯ 2022ರ ವಿಶೇಷಾಂಕ ’ತುಂಗಾನಿಧಿ’ ಬಿಡುಗಡೆಗೊಳಿಸಿ ಮಾತನಾಡಿ, ಪತ್ರಿಕೆಗಳನ್ನು ಓದುವುದರಿಂದ ಜ್ಞಾನಮಟ್ಟ ಹೆಚ್ಚುತ್ತದೆ. ನಿತ್ಯ ಪತ್ರಿಕೆ ಓದುವ ಹವ್ಯಾಸವನ್ನು ಚಿಕ್ಕವಯಸ್ಸಿನಿಂದಲೇ ರೂಢಿಸಿಕೊಳ್ಳಿ. ಓದುವ ಹವ್ಯಾಸವೇ ನನ್ನನ್ನು ಇಂದಿನ ಮಟ್ಟಕ್ಕೆ ಬೆಳೆಸಿತು ಎಂದು ಸಲಹೆ ನೀಡಿದರು.
ಪತ್ರಿಕೆಗಳನ್ನು ಓದುವುದರಿಂದ ಸಾಮಾನ್ಯ ಜ್ಞಾನ ಬೆಳೆಯುವ ಜೊತೆಗೆ ಉತ್ತಮ ಸಂಸ್ಕಾರ, ಶಿಸ್ತು, ತಾಳ್ಮೆ ವೃದ್ಧಿಯಾಗುತ್ತದೆ. ನಿತ್ಯ ದಿನ ಪತ್ರಿಕೆಯನ್ನು ಓದದಿದ್ದರೆ ಏನೋ ಕಳೆದುಕೊಂಡ ಹಾಗೇ ಬಾಸವಾಗುತ್ತದೆ ಎಂದರು.
ಎಸ್.ಕೆ. ಗಜೇಂದ್ರಸ್ವಾಮಿ ಅವರ ಸಂಪಾದಕತ್ವದಲ್ಲಿ ಹೊರಬರುತ್ತಿರುವ ತುಂಗಾ ತರಂಗ ಪತ್ರಿಕೆಯ ’ತುಂಗಾ ನಿಧಿ’ ವಿಶೇಷಾಂಕವನ್ನು ಬಿಡುಗಡೆಗೊಳಿಸುತ್ತಿರುವುದು ಸಂತೋಷವಾಗಿದೆ. ಇನ್ನಷ್ಟು ಉತ್ತಮ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಿಕೆಯ ಸಂಪಾದಕ ಎಸ್.ಕೆ. ಗಜೇಂದ್ರ ಸ್ವಾಮಿ, ಹೊಸ ಬಳಗದೊಂದಿಗೆ ಆರಂಭಗೊಂಡ ತುಂಗಾ ತರಂಗ ದಿನಪತ್ರಿಕೆ ಮುದ್ರಣ ಅಲ್ಲದೇ ಫೇಸ್‌ಬುಕ್, ವಾಟ್ಸಪ್, ಟ್ವಿಟರ್, ಗೂಗಲ್+ ಗಳಲ್ಲಿ ಪತ್ರಿಕೆಯನ್ನು ಶೇರ್ ಮಾಡುವ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಹೆಸರು ಮಾಡುತ್ತಿದೆ. ಪ್ರತಿ ವರುಷ ವಿಶೇಷಾಂಕ ಕ್ಯಾಲೆಂಡರ್ ನೀಡುತ್ತದೆ ಎಂದರು.
Also read: ನಂದಿನಿ ಹಾಲು, ಮೊಸರಿನ ದರ ಏರಿಕೆ: ಪ್ರತಿ ಲೀಟರ್ ಬೆಲೆ ಎಷ್ಟು? ಎಂದಿನಿಂದ ಜಾರಿ?
ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಸಂಚಾರಿ ಠಾಣೆಯ ಎಎಸ್ ಐ ದಾನಂ, ಶ್ರೀನಿವಾಸ್ ಹಾಗೂ ಡಿವೈಎಸ್ ಪಿ ಕಛೇರಿಯ ಎಎಸ್ ಐ ಮಂಜುನಾಥ್ ಅವರಿಗೆ ಸನ್ಮಾನಿಸಲಾಯಿತು.
ಛಲದಂಕ ಮಲ್ಲ ಪತ್ರಿಕೆಯ ಸಂಪಾದಕ ಪದ್ಮನಾಭ್ ಜಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಪತ್ರಿಕಾ ಸಂಪಾದಕರುಗಳಾದ ಶಿ.ಜು. ಪಾಶ, ಭರತೇಶ್, ಇ. ಚಂದ್ರಶೇಖರ್, ಗೆಳೆಯರ ಬಳಗದ ರಾಜ್ಯಾಧ್ಯಕ್ಷ ಅನಿಲ್ ಕುಂಚಿ, ಶಿಕ್ಷಕಿ ವೀಣಾರಾಣಿ, ದರ್ಶನ್ ಜಿ. ಸ್ಬಾಮಿ, ರಘು, ರವಿ.ಎ, ರಾಕೇಶ್ ಸೋಮಿನಕೊಪ್ಪ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post