ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ರೋಟರಿ ಕ್ಲಬ್ ವತಿಯಿಂದ ವೃತ್ತಿ ಮಾಸಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕ ವೃತ್ತಿಪರರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ವಿಧಾತ್ರಿ ಭವನದ ಕಿರಣ್ ಕುಮಾರ್, ಸ್ವರ್ಣ ಮ್ಯಾಚಿಂಗ್ ಸೆಂಟರ್‌ನ ಸುನಿತಾ ಭೂಷಣ್, ಆರೋಗ್ಯ ಇಲಾಖೆಯ ಪ್ರತಿಮಾ ಡಾಕಪ್ಪ ಗೌಡ, ಬೇಕ್-ಫ್ಲೇಕ್‌ನ ಶ್ರುತಿ ಶೆಟ್ಟಿ, ಕೊಲ್ಲಾಪುರ್ ಚಾಟ್ಸ್‌ನ ದೀಪಾಲಿ ಇವರುಗಳಿಗೆ ಅವರ ವೃತ್ತಿಯಲ್ಲಿ ಉನ್ನತ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಶಿವಮೊಗ್ಗದ ಅಧ್ಯಕ್ಷರಾದ ಕಿಶೋರ್ ಶಿರ್ನಾಳಿ, ಕಾರ್ಯದರ್ಶಿಯಾದ ಆನಂದ್, ಕಮಿಟಿಯ ಸದಸ್ಯರುಗಳಾದ ಕಾಂಚನ್ ಕುಲಕರ್ಣಿ ಮತ್ತು ಎಸ್.ಜಿ. ಗೋಪಾಲ್ ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















