ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್ ವತಿಯಿಂದ ಶುಭಮಂಗಳ ಸಮುದಾಯ ಭವನದಲ್ಲಿ ಅಧಿಕ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಕಾಲ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದೇವಾಲಯದ ಮುಖ್ಯ ಅರ್ಚಕ ವಿನಾಯಕ ಬಾಯರಿ ಹೇಳಿದರು.
ಅವರು ಇಂದು ಶುಭಮಂಗಳ ಸಮುದಾಯ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಧಿಕ ಮಾಸ ಎಂಬುದು ಭಾರತೀಯ ಹಿಂದೂ ಪಂಚಾಂಗದಲ್ಲಿ ವಿಶೇಷ ಸ್ಥಾನ ಪಡೆದಿದೆ. ಈ ಸಂದರ್ಭದಲ್ಲಿ ಶುಭ ಕಾರ್ಯಗಳು ನಡೆಯದಿದ್ದರೂ ಕೂಡ ಧಾರ್ಮಿಕ, ಸಾಂಸ್ಕøತಿಕ, ಇತರೆ ಲೋಕಕಲ್ಯಾಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ದೇವಾಲಯ ಸಮಿತಿ ಕೂಡ ಜು.18ರಿಂದ ಆ.16ರವರೆಗೆ ಅರ್ಚಕ ವೃಂದ, ಭಜನಾ ಪರಿಷತ್, ದಿ ಆರ್ಟ್ ಆಫ್ ಲಿವಿಂಗ್, ಭಾರತೀಯ ವೈದ್ಯಕೀಯ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದರು.
ಒಂದು ತಿಂಗಳ ಕಾಲ ಹೋಮ ಹವನ, ಮಾತೆಯರಿಂದ ಭಜನೆ, ವಿದ್ವಾಂಸರಿಂದ ಧಾರ್ಮಿಕ ಉಪನ್ಯಾಸ, ಆರೋಗ್ಯ ಶಿಬಿರ, ಸಾಧಕರಿಗೆ ಸನ್ಮಾನ, ಯೋಗ, ಹೀಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಇದರ ಉದ್ಘಾಟನಾ ಸಮಾರಂಭ ಜು.18ರಂದು ಸಂಜೆ 6ಗಂಟೆಗೆ ನಡೆಯಲಿದೆ. ಗೋಣಿಬೀಡಿನ ಶೀಲಸಂಪಾದನಾ ಮಠದ ಸಿದ್ದಲಿಂಗ ಸ್ವಾಮೀಜಿಗಳು ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಅಧ್ಯಕ್ಷತೆ ವಹಿಸಲಿದ್ದು, ಉಪನ್ಯಾಸಕ ಜಿ.ಎಸ್. ನಟೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭ ಆ.14ರಂದು ನಡೆಯಲಿದ್ದು, ಇದರ ಸಾನಿಧ್ಯವನ್ನು ಚಿನ್ಮಯ ಮಿಷನ್ನಿನ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ವಹಿಸಲಿದ್ದಾರೆ ಎಂದರು.
Also read: ಇವರಿಗೆ ಮದ್ಯದಂಗಡಿ ಬೇಕು, ಅವರಿಗೆ ಮದ್ಯದಂಗಡಿ ಬೇಡ: ಶಿವಮೊಗ್ಗದಲ್ಲೊಂದು ವಿಲಕ್ಷಣ ಪ್ರತಿಭಟನೆ
ಜು.18ರಿಂದ ಆ.16ರವರೆಗ ಪ್ರತಿದಿನ ಭಜನೆ ಕಾರ್ಯಕ್ರಮ ಇರುತ್ತದೆ. ಮತ್ತು ಸಂಜೆ 6-30ಕ್ಕೆ ವಿದ್ವಾಂಸರಿಂದ ಉಪನ್ಯಾಸ ಮಾಲಿಕೆ ಇರುತ್ತದೆ. ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಜಿ.ಎಸ್. ನಟೇಶ್, ವಿದ್ವಾನ್ ಮೋಹನ್ ಕುಮಾರ್, ಹಂದಲಸು ವಾಸುದೇವ, ಡಾ. ವೀಣಾ ಬನ್ನಂಜೆ ಭಾಗವಹಿಸಲಿದ್ದಾರೆ ಇದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.
ದ ಆರ್ಟ್ ಆಫ್ ಲಿವಿಂಗ್ ಹಾಗೂ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಜು.18ರಿಂದ ಆ.14ರವರೆಗೆ ಒಂದು ತಿಂಗಳು ಕಾಲ ಬೆಳಿಗ್ಗೆ 6ರಿಂದ ಏಳರವರೆಗೆ ಸರಳ ಯೋಗಾಭ್ಯಾಸ, ಧ್ಯಾನ, ಪ್ರಾಣಾಯಾಮ ನಡೆಯಲಿದೆ. ಇದರ ಜೊತೆಗೆ ಖ್ಯಾತ ವೈದ್ಯರು ಶಿಬಿರಕ್ಕೆ ಆಗಮಿಸಿ ಆಹಾರ ಮತ್ತು ಆರೋಗ್ಯ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಐಎಂಎ ಕಾರ್ಯದರ್ಶಿ ಡಾ. ರಕ್ಷಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಪ್ರಮುಖರಾದ ಸ.ನಾ. ಮೂರ್ತಿ, ಪ್ರಭಾಕರ್, ಎಸ್.ಎಂ. ವೆಂಕಟೇಶ್, ಶಬರೀಶ್ ಕಣ್ಣನ್, ವಿನಯ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post