ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಕ್ರಮ ಚಟುವಟಿಕೆಗಳ ತಾಣವಾಗಿರುವ ಮೈನ್ ಮಿಡ್ಲ್ ಸ್ಕೂಲ್‌ಗೆ ಸೂಕ್ತ ಭದ್ರತೆ ಒದಗಿಸುವಂತೆ ಡಿಡಿಪಿಐ, ಡಿಡಿಪಿಯು ಹಾಗೂ ಬಿಇಓ ಅವರಿಗೆ ಅಣ್ಣ ಹಜಾರೆ ಅಣ್ಣಾ ಹಜಾರೆ ಹೋರಾಟ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಮೈನ್ ಮಿಡ್ಲ್ ಸ್ಕೂಲ್ ಶಾಲೆಯ ಆವರಣದಲ್ಲಿ ನಡೆಯುವ ಘಟನೆಗಳ ಬಗ್ಗೆ ದಿನನಿತ್ಯವೂ ಸುದ್ದಿ ನೋಡುತ್ತಿದ್ದೇವೆ. ವಿಶಾಲವಾದ ಆವರಣದಲ್ಲಿ ನಾನಾ ಶಾಲಾ ಕಟ್ಟಡ ತಲೆಯೆತ್ತಿವೆ, ಮಕ್ಕಳಿಗೆ ಆಟ ವಾಡಲು ಜಾಗವಿರದಂತೆ ಸಾರ್ವಜನಿಕರ ವಾಹನ ಪಾರ್ಕಿಂಗಿಗೆ ಅವಕಾಶ ಕಲ್ಪಿಸಲಾಗಿದೆ. ರಾತ್ರಿಯಾದರೆ ಗುಂಡು ಪಾರ್ಟಿ, ಅನೈತಿಕ ಚಟುವಟಿಕೆ ತಾಣವಾಗಿರುವ ಶಾಲಾ ಆವರಣದ ರಕ್ಷಣೆಗೆ ಬೀಗ ಹಾಕುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಮಕ್ಕಳು ಶಾಲೆಯ ಒಳಗೆ ಮತ್ತು ಹೊರಗೆ ಹೋಗಲು ಒಂದು ಗೇಟ್ ಯಾವಾಗಲೂ ತೆರೆದಿರುತ್ತದೆ, ಶಾಲಾ ಮತ್ತು ಕಾಲೇಜು ಆರಂಭ ವಾಗುವ ಹಾಗೂ ಶಾಲೆ ಬಿಡುವ ಅರ್ಧ ಘಂಟೆ ಮುಂಚೆ ಗೇಟ್ ತೆರೆದು ಸದಾ ಗೇಟಿಗೆ ಬಿಗಾ ಹಾಕಲು ಅಣ್ಣಾ ಹಜಾರೆ ಹೋರಾಟ ಸಮಿತಿಯ ಸದಸ್ಯರು ಹೇಳಿದರು.
Also read: ಬಾವಿ ಕಾಣೆಯಾಗಿದೆ, ಹುಡುಕಿ ಕೊಡಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪಿಡಿಒ
ಈ ಸಂದರ್ಭದಲ್ಲಿ ಶಿವಸ್ವಾಮಿ ಭೂಪಾಳಂ, ಜನಮೇಜಿರಾವ್, ಚಿದಾನಂದ, ಸುಬ್ರಹ್ಮಣ್ಯ, ಶ್ರೀಕಾಂತ್, ಪ್ರೂ.ಕಲ್ಲನ, ಮನೋಹರ್, ಶಿವಕುಮಾರ್ ಕಸಟೆ, ಕೃಷ್ಣಮೂರ್ತಿ, ಚನ್ನವೀರಪ್ಪ ಗಾಮನಗಟ್ಟಿ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post