ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಧಾರ ರಕ್ತದಾನಿಗಳ ಸೇವಾ ಟ್ರಸ್ಟ್ ವತಿಯಿಂದ ನೆನ್ನೆ ಮೆಗ್ಗಾನ್ ರಕ್ತ ನಿಧಿಯಲ್ಲಿ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂರ್ಭದಲ್ಲಿ ಗೌರವ ಅಧ್ಯಕ್ಷರು ಪ್ರಶಾಂತ್ ಶಾಸ್ತ್ರೀ 88 ಬಾರಿ ರಕ್ತದಾನ ಮಾಡಿದರು. ಸಂಸ್ಥೆಯ ಅಧ್ಯಕ್ಷರು ಸಿಹಿಮೊಗೆ ಶ್ರೀನಿವಾಸ್ 79 ಬಾರಿ ರಕ್ತದಾನ ಮಾಡಿದ್ದು, ಸಂಸ್ಥೆಯ ಇತರೆ 30 ಸದ್ಯಸರು ರಕ್ತದಾನ ಮಾಡಿದ್ದಾರೆ.
ಶಿಬಿರದಲ್ಲಿ ಸಚಿನ್ ಗೌಡ, ಕೃಷ್ಣ ಮೂರ್ತಿ, ಅರುಣಾ, ಪ್ರಮೋದ್, ಶಿವಕುಮಾರ್, ಮಂಜುನಾಥ್, ಶರವಣ ಮತ್ತಿತರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post