ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅತಿಯಾದ ರಾಸಾಯನಿಕ ಹಾಗೂ ಔಷಧಗಳ ಅವಲಂಬನೆ ಭೂಮಿಗಾಗಲಿ ದೇಹಕ್ಕಾಗಲಿ ಮಾರಕವಾಗಿದ್ದು, ಔಷಧಗಳ ಗುಣಮಟ್ಟದ ನಿಯಂತ್ರಣ ಸಮಕಾಲೀನ ಸಮಸ್ಯೆಗಳ ನಿವಾರಣೆಗೆ ಅತ್ಯವಶ್ಯಕವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಅಭಿಪ್ರಾಯಪಟ್ಟರು.
ಸೋಮವಾರ ನಗರದ ರಾಷ್ಟ್ರೀಯ ಫಾರ್ಮಸಿ ಕಾಲೇಜಿನಲ್ಲಿ ಔಷಧಗಳ ಉತ್ಪಾದನೆಯಲ್ಲಿ ಗುಣಮಟ್ಟದ ನಿಯಂತ್ರಣ ಹಾಗೂ ಸಮಕಾಲೀನ ಸಮಸ್ಯೆಗಳ ಕುರಿತ ವಿಶೇಷ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು, ನಾಲಿಗೆಗೆ ರುಚಿಯಾದ ಆಹಾರ ದೀರ್ಘಾವಧಿಯ ಪರಿಣಾಮವನ್ನು ಬೀರುತ್ತದೆ. ಮಲೆನಾಡನ್ನು ತೀವ್ರವಾಗಿ ಕಾಡುತ್ತಿರುವ ಎಲೆಚುಕ್ಕೆ ರೋಗ ರೈತರನ್ನು ಹತಾಶೆಗೊಳಿಸಿದೆ. ತಜ್ಞರ ವರದಿಯ ಪ್ರಕಾರ ಅತಿಯಾದ ರಾಸಾಯನಿಕ ಬಳಕೆಯಿಂದಾಗಿ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಂಡಿದ್ದು ಪೊಟಾಶ್ ಅಂಶ ಸಂಪೂರ್ಣವಾಗಿ ಕ್ಷೀಣಿಸಿದೆ. ರೈತರು ಭೂಮಿಯಲ್ಲಿನ ಮಣ್ಣನ್ನು ಪರೀಕ್ಷಿಸುತ್ತಿಲ್ಲ. ಭೂಮಿಯಲ್ಲಿನ ರೈತ ಸ್ನೇಹಿ ಜಂತುಗಳೆಲ್ಲವೂ ಅಳಿದು ಹೋಗಿದೆ. ಇಂತಹ ಹೊತ್ತಿನಲ್ಲಿ ಮತ್ತೆ ಸಾವಯಾವ ಗೊಬ್ಬರಗಳ ಬಳಕೆಗೆ ತಜ್ಞರಿಂದ ಶಿಫಾರಸ್ಸು ಬರುತ್ತಿದ್ದು ಅನುಷ್ಟಾನ ಕಷ್ಟ ಸಾಧ್ಯ. ಹಾಗಾಗಿಯೇ ಬಣ್ಣದ ವ್ಯವಸ್ಥೆಗೆ ಅವಲಂಬಿತವಾಗದೇ ಸಹಜ ಪ್ರಕೃತಿಯಲ್ಲಿ ಬಾಳೋಣ ಎಂದರು.

ಮಣಿಪಾಲ್ ಫಾರ್ಮಸಿ ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಕೆ.ಗಿರೀಶ್ ಪೈ ಮಾತನಾಡಿ ಕಂಪನಿಗಳು ಉತ್ಫಾದಿಸಿದ ಜೌಷಧಗಳನ್ನು ಯುಎಸ್‌ಎಫ್‌ಡಿಯೆ ಪರೀಕ್ಷಿಸಿದ ನಂತರ ಗುಣಮಟ್ಟದ ಆಧಾರದ ಮೇಲೆ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಅವಕಾಶ ನೀಡುತ್ತದೆ. ಗುಣಮಟ್ಟದಲ್ಲಿನ ವ್ಯತ್ಯಾಸ ಕಂಪನಿಗಳಿಗಾಗಲಿ, ಮನುಷ್ಯರಿಗಾಗಲಿ ಅತೀಯಾದ ನಷ್ಟವನ್ನು ಉಂಟುಮಾಡಲಿದ್ದು, ಫಾರ್ಮಸಿಸ್ಟ್‌ಗಳು ಬಹಳ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.

Also read: ಸ್ಟ್ಯಾನ್ಫೋರ್ಡ್ ವಿಶ್ವವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿವಿ ಪ್ರಾಧ್ಯಾಪಕರು











Discussion about this post