ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೇಡಿಯೋ ಶಿವಮೊಗ್ಗ ಹಾಗೂ ಪರಿಸರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆಸಲಾದ ಕನ್ನಡ ರಸಪ್ರಶ್ನೆ 2023ರ ಪೂರ್ವಭಾವಿ ಸುತ್ತು ಯಶಸ್ವಿಯಾಗಿ ಜರುಗಿತು.
ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಈ ಸ್ಪರ್ಧೆ ವಿದ್ಯಾರ್ಥಿ ವಿಭಾಗ ಹಾಗೂ ಸಾರ್ವಜನಿಕರ ವಿಭಾಗದಲ್ಲಿ ನಡೆಯಿತು. ಎರಡೂ ವಿಭಾಗದಲ್ಲೂ ಅಂತಿಮ ಸುತ್ತಿಗೆ ತಂಡಗಳನ್ನು ಆಯ್ಕೆ ಮಾಡಲಾಯಿತು.
ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಮಧು, ರೇಡಿಯೋ ಶಿವಮೊಗ್ಗದ ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ, ನಿಲಯ ಸಂಯೋಜಕ ಗುರುಪ್ರಸಾದ್, ಕಾರ್ಯಕ್ರಮ ಸಂಯೋಜಕ ಕೆ.ವಿ. ಅಜೇಯ ಸಿಂಹ, ಆರ್ ಜೆಗಳಾದ ಅರ್ಪಿತಾ, ಮಹಾಲಕ್ಷ್ಮೀ, ಅಶ್ವಿನಿ, ಆರ್ ಜೆ ಶ್ವೇತಾ ಸ್ಟುಡಿಯೋದಿಂದ ಲೈವ್ ನಡೆಸಿಕೊಟ್ಟರು.
ರಸಪ್ರಶ್ನೆ ಸಿದ್ಧಪಡಿಸಿದ ತಂಡದ ಪ್ರಮುಖ ಚೇತನ್ ಸಿ ರಾಯಹಳ್ಳಿ ಹಾಜರಿದ್ದರು.
ಹಿತೈಷಿ ಸಂಜಯ್ ಬೆಳಿಯಪ್ಪ, ಪುಟಾಣಿಗಳಾದ ತನುಷ್ ನಾಚಪ್ಪ, ಅಭಿನಾಟ್ಯ ಹಾಗೂ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಸಿಬ್ಬಂದಿ ಬಳಗದವರು ಇದ್ದರು.
Also read: ಮತ್ತೆ ಮುರುಘಾ ಶ್ರೀ ಬಂಧನ | ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರು
ನ.26ರಂದು ಬೆಳಗ್ಗೆ 10 ಗಂಟೆಯಿಂದ ರಸಪ್ರಶ್ನೆಯ ಅಂತಿಮ ಸುತ್ತು ರೇಡಿಯೋ ಶಿವಮೊಗ್ಗದ ಸ್ಟುಡಿಯೋದಿಂದ ನೇರಪ್ರಸಾರವಿರುತ್ತದೆ. ರೇಡಿಯೋ ಶಿವಮೊಗ್ಗ ಆಪ್ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್’ನಲ್ಲಿ ಲಭ್ಯವಿದೆ.
ಅಂತಿಮ ಸುತ್ತಿಗೆ ಆಯ್ಕೆಯಾದ ತಂಡಗಳು
ಸಾರ್ವಜನಿಕರ ವಿಭಾಗ: ಗೀತಾ ಹಾಗೂ ಭಾರತಿ ಎನ್ ರಾವ್, ನಂದಿನಿ ಬಿ.ವಿ ಹಾಗೂ ಕಿರಣ್ ಕುಮಾರ್ ಹೆಚ್, ಯಶೋದಾ ಶೇಖರ್ ಹಾಗೂ ಗೀತಾ ಬಿ.ಜಿ., ಅನಿರುದ್ಧ ಎಸ್. ಹಾಗೂ ಸಂಹಿತಾ ಮಹಿಮಾ ಭಾರ್ಗವ ಆರ್, ಅಂಬಿಕಾ ಬಿ.ಟಿ ಹಾಗೂ ಶ್ರೀನಿವಾಸ ನಗಲಾಪುರ
ವಿದ್ಯಾರ್ಥಿ ವಿಭಾಗ: ಚಿಂತನ್ ಎ. ಕಲ್ಲಜ್ಜಿ ಹಾಗೂ ರಜತ್ ಕೃಷ್ಣ ಆರ್ ಹತ್ವಾರ್ (ಸಾಂದೀಪನಿ ಶಾಲೆ), ನಿಸರ್ಗ ಎನ್ ಹಾಗೂ ಅಕ್ಷತಾ ಬಿ.ವೈ., (ಕಸ್ತೂರ ಬಾ ಪಿಯು ಕಾಲೇಜು), ಶರಣ್ಯಾ ಶರ್ಮ ಹಾಗೂ ಸುಮೇಧಾ ರಾವ್ ಎಸ್.ಎನ್. (ಮಹಾವೀರ ವಿದ್ಯಾಲಯ), ಸಂಕರ್ಷಣ ಎಸ್ ನಾಡಿಗ್ ಹಾಗೂ ಭುವನ್ ಕುಮಾರ್ ಕೆ.ಬಿ. (ಸಾಂದೀಪನಿ ಶಾಲೆ), ಭುವನ ವೈ ಹಾಗೂ ಶ್ರೇಯಾ ಆರ್ ಶೇಟ್ (ಮಹಾವೀರ ವಿದ್ಯಾಲಯ).
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post