ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೊಸಮನೆಯ ವಿವಿಧ ಕಡೆ ಕಾಂಕ್ರೀಟ್ ರಸ್ತೆ ಹಾಗೂ ಕನ್ಸರ್ವೆನ್ಸಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಪಾಲಿಕೆ ಸದಸ್ಯರ ಅನುದಾನದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗೆ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ಇಂದು ಗುದ್ದಲಿ ಪೂಜೆ ನೆರವೇರಿಸಿದರು.
ಚಾನಲ್ ಬಲಭಾಗದ ಎರಡು ಮತ್ತು ಮೂರರ ತಿರುವಿನಲ್ಲಿ ಮಧ್ಯಭಾಗದಲ್ಲಿ ಬರುವ ರಸ್ತೆಗೆ ಕಾಂಕ್ರೀಟ್ ರಸ್ತೆ, ಶಿವಮೊಗ್ಗ ಟೈಮ್ಸ್ ಪತ್ರಿಕಾ ಕಚೇರಿ ಹತ್ತಿರವಿರುವ ಶ್ರೀಕಂಠ ಕೂಡಿಗೆ ಅವರ ಮನೆ ಹಿಂಭಾಗದ ಕನ್ಸರ್ವೆನ್ಸಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಹತ್ತಿರ ಇರುವ ಚಿನ್ನು, ರಾಮು ರವರ ಮನೆಯ ಹಿಂಭಾಗದ ಕನ್ಸರ್ವೆನ್ಸಿ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.
Also read: ರೇಡಿಯೋ ಶಿವಮೊಗ್ಗ | ಕನ್ನಡ ರಸಪ್ರಶ್ನೆ ಯಶಸ್ವಿ | ಅಂತಿಮ ಸುತ್ತಿಗೆ ಆಯ್ಕೆ
ಮುಖಂಡರಾದ ಕೆ. ರಂಗನಾಥ್ ವಾರ್ಡಿನ ಪ್ರಮುಖರಾದ ಜಗದೀಶ್ ರಮೇಶ್, ಹರೀಶ್, ವೆಂಕಟೇಶ್, ಆಚಾರಿ ಗೋಪಿ , ರಾಜೇಶ್ ಮಂದಾರ, ನಾಗರಾಜ್ ಗೆಡ್ಡೆ, ಸೌಭಾಗ್ಯಮ್ಮ, ವೀಣಮ್ಮ, ವಸುಂದರ, ನೇತ್ರಾವತಿ, ಕಮಲಮ್ಮ, ಮಂಗಳಮ್ಮ, ರಾಣಿಯಮ್ಮ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಗಿರೀಶ್, ಯುವ ಕಾಂಗ್ರೆಸ್ ನಗರಾಧ್ಯಕ್ಷ ಬಿ. ಲೋಕೇಶ್, ಪವನ್, ಅರ್ಚಕರಾದ ಯೋಗೇಶ್ ಉಡುಪ, ಗುತ್ತಿಗೆದಾರರಾದ ಶರತ್, ಸುನೀಲ್ ಹಾಗೂ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post