ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಅವರ ಹತ್ಯೆಯನ್ನು ರಾಮ್ ಸೇನೆ ಶಿವಮೊಗ್ಗ ಜಿಲ್ಲಾ ಘಟಕ ಕಟುವಾಗಿ ಖಂಡಿಸಿದ್ದು, ಮೃತ ಹರ್ಷ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಕೂಡಲೇ 50 ಲಕ್ಷ ಪರಿಹಾರ ಘೋಷಣೆ ಮಾಡಬೇಕು ಎಂದು ರಾಮ್ ಸೇನೆ ಶಿವಮೊಗ್ಗ ಜಿಲ್ಲಾ ಮುಖಂಡ ಪ್ರಶಾಂತ್ ಬಂಗೇರ ಒತ್ತಾಯಿಸಿದ್ದಾರೆ.
ಹಿಂದೂ ಕಾರ್ಯಕರ್ತನನ್ನು ಹತ್ಯೆ ಗೈದ ಆರೋಪಿ ಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ರಾಜ್ಯ ಸರ್ಕಾರ ಕ್ಕೆ ನೈತಿಕತೆ ಇದ್ದರೆ ಕೂಡಲೇ ಪಿ.ಫ್. ಐ, ಎಸ್‌ಡಿಪಿಐ ನಂತ ಭಯೋತ್ಪದಕ ಸಂಘಟನೆಗಳನ್ನು ನಿಷೇದ ಮಾಡಬೇಕು ಎಂದು ಆಗ್ರಹಿಸಿದೆ.
ಸರ್ಕಾರ ಇಂತಹ ಉಗ್ರ ಸಂಘಟನೆಗಳನ್ನು ನಿಷೇದ ಮಾಡದೇ ಹೋದರೆ ರಾಜ್ಯದಲ್ಲಿ ನಡೆಯುವ ಹಿಂದೂ ಕಾರ್ಯಕರ್ತರ ಸಾವಿಗೆ ನೇರ ಹೊಣೆ ಆಗುತ್ತದೆ. ಇಂತಹ ಘಟನೆಗಳು ಮತ್ತೆ ಮತ್ತೆ ರಾಜ್ಯದಲ್ಲಿ ಮರುಕಳಿಸುತ್ತಲೇ ಇದೆ. ಇದಕ್ಕೆಲ್ಲ ರಾಜ್ಯ ಸರ್ಕಾರ ಕೂಡ ಹೊಣೆ. ಹಿಂದುತ್ವದ ಆಧಾರದಲ್ಲಿ ಅಧಿಕಾರಕ್ಕೆ ಬಂದು, ಹಿಂದೂಗಳ ಹತ್ಯೆ ಆಗುತ್ತಿದ್ದರು ಬಾಯಿ ಮುಚ್ಚಿಕೊಂಡಿರುವ ಈ ಸರ್ಕಾರಕ್ಕೆ ದಿಕ್ಕಾರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
Also read: ಭಾವೊದ್ವೇಗ ಬೇಡ, ಶಾಂತಿ ಕಾಪಾಡಿ, ಪೊಲೀಸರೊಂದಿಗೆ ಸಹಕರಿಸಿ: ಇದು ಕಲ್ಪ ಮೀಡಿಯಾ ಹೌಸ್ ಕಳಕಳಿ
ಗೃಹ ಸಚಿವರ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿರೋದು ನಾಚಿಗೇಡಿನ ವಿಷಯ. ರಾಜ್ಯ ಸರ್ಕಾರಕ್ಕೆ ಇಂತಹ ಪುಂಡರನ್ನು ಮಟ್ಟ ಹಾಕಲು ಆಗದಿದ್ದರೆ ಹೇಳಲಿ ರಾಮ್ ಸೇನೆ ಸಂಘಟನೆ ಇಂತಹ ಮತಾಂದರನ್ನು ಮಟ್ಟ ಹಾಕಲು ಸಿದ್ದವಾಗಿದೆ ಎಂದು ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post