ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ರಾಮನ ವ್ಯಕ್ತಿತ್ವಕ್ಕಿಂತಲೂ ರಾವಣನ ವ್ಯಕ್ತಿತ್ವವೇ ವಿಜೃಂಭಿಸುತ್ತಿದ್ದು, ಇದನ್ನ ಬದಲಾವಣೆ ಮಾಡಲು ರಾಮನ ಸಂಸ್ಕೃತಿಯನ್ನು ಮನೆಯಿಂದಲೇ ಮಕ್ಕಳಿಗೆ ಕಲಿಸಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಕರೆ ನೀಡಿದರು.
ನಗರದಲ್ಲಿಂದು ಮಾತನಾಡಿದ ಅವರು, ರಾಮನ ಸಂಸ್ಕೃತಿಯನ್ನು ಯಾವುದೇ ಶಾಲೆಗಳಲ್ಲಿ ಹೇಳಿಕೊಡುವುದಿಲ್ಲ. ಹೀಗಾಗಿ, ಮನೆಗಳಲ್ಲೇ ಮಕ್ಕಳಿಗೆ ರಾಮನ ಸಂಸ್ಕೃತಿ ಹಾಗೂ ಆಚಾರ ವಿಚಾರಗಳನ್ನು ಪೋಷಕರು ಹೇಳಿಕೊಡಬೇಕು ಎಂದರು.
ನಮ್ಮ ಮಕ್ಕಳಿಗೆ ಸಂಸ್ಕೃತಿಯನ್ನು ಹೇಳಿಕೊಡದೇ ಇದ್ದರೆ ಮತಾಂತರದ ಮೂಲಕ ಮುಂದಿನ ದಿನಗಳಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ಮಕ್ಕಳಿಂದಳೇ ತೊಂದರೆಯಾಗುವ ಅಪಾಯವಿದೆ. ಹೀಗಾಗಿ, ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ, ಹಬ್ಬ ಹರಿದಿನಗಳಲ್ಲಿ ದೇವರ, ಆದರ್ಶಮೂರ್ತಿಗಳ ವೇಷ ಭೂಷಣ ಹಾಕುವ ಮೂಲಕ ಜಾಗೃತಿ ಮೂಡಿಸಿ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post